alex Certify ಸ್ಟಾರ್ ನಟನ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ; ಬಾಲಿವುಡ್‌ ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿದ ನ್ಯಾಷನಲ್‌ ಕ್ರಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್ ನಟನ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ; ಬಾಲಿವುಡ್‌ ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿದ ನ್ಯಾಷನಲ್‌ ಕ್ರಶ್

ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಬಳಿಕ ಬೇರೆ ಬೇರೆ ಭಾಷೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಈ‌ ನಟಿಗೆ ಇದೀಗ ಬೇಡಿಕೆ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇದೀಗ ಬಾಲಿವುಡ್ ಸ್ಟಾರ್ ನಟನ ಜೊತೆ ನಟಿಸಲು ಸಜ್ಜಾಗಿದ್ದಾರೆ.

ಹೌದು, ಬಾಲಿವುಡ್‌ನ ನಟಿಯರನ್ನೇ ಸೆಡ್ಡು ಹೊಡೆದು ಬಾಲಿವುಡ್ ನ ಸ್ಟಾರ್ ನಟನಿಗೆ ನಾಯಕಿಯಾಗಿ ಮಿಂಚಲಿದ್ದಾರೆ ರಶ್ಮಿಕಾ. ಟೈಗರ್ ಶ್ರಾಫ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರಂತೆ. ಸಿದ್ಧಾರ್ಥ್ ಆನಂದ್ ನಿರ್ಮಾಣದ, ರೋಹಿತ್ ಧವನ್ ನಿರ್ದೇಶನದ ಸಿನಿಮಾದಲ್ಲಿ ಟೈಗರ್ ಶ್ರಾಫ್‌ ನಾಯಕನಟನಾಗಿ ಆಕ್ಟ್ ಮಾಡ್ತಾ ಇದ್ದು ನಾಯಕಿಯಾಗಿ ರಶ್ಮಿಕಾ ಆಯ್ಕೆ ಆಗಿದ್ದಾರೆ.

ಈಗಾಗಲೇ ಅಮಿತಾಬ್ ಜೊತೆಯಲ್ಲಿ ಸಿನಿಮಾ ಮಾಡಿರುವ ಈ ನಟಿ ಇದೀಗ ಸ್ಟಾರ್ ನಟನ ಜೊತೆ ಸ್ಕ್ರೀನ್ ಶೇರ್ ಮಾಡ್ತಾ ಇದ್ದಾರೆ. ಸದ್ಯಕ್ಕೆ ಫುಲ್ ಬ್ಯುಸಿ ಆಗಿದ್ದಾರೆ ಮಂದಣ್ಣ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...