alex Certify ಸ್ಟಂಟ್ ಮಾಡಲು ಹೋಗಿ ಅವಘಡ ಮಾಡಿಕೊಂಡ ಯುವಕ….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಂಟ್ ಮಾಡಲು ಹೋಗಿ ಅವಘಡ ಮಾಡಿಕೊಂಡ ಯುವಕ….! ವಿಡಿಯೋ ವೈರಲ್

ಬೆಂಕಿ ಜೊತೆ ಸರಸ ಬೇಡ ಅನ್ನೋ ಹಿರಿಯರ ಮಾತಿದೆ. ಆದರೂ ಒಂದಿಷ್ಟು ಜನ ಸ್ಟಂಟ್ ಮಾಡಲು ಹೋಗಿ ಅನಾಹುತ ಮಾಡಿ ಕೊಳ್ತಾರೆ. ಇದೀಗ ಇಲ್ಲೊಬ್ಬ ಯುವಕ ಹೀಗೆ ಸ್ಟಂಟ್ ಮಾಡಲು ಹೋಗಿ ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ರವಿ ಪಾಟಿದಾರ್ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಇದಾಗಿದೆ. ಎಲ್ಲಿಯ ವಿಡಿಯೋ ಅನ್ನುವುದು ಗೊತ್ತಿಲ್ಲ. ಯಾವುದೋ ಜಾತ್ರಾ ಮೇಳದಲ್ಲಿ ನಡೆದ ಘಟನೆ ಎಂಬುದು ವಿಡಿಯೋದಿಂದ ತಿಳಿಯಬಹುದಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಬೆಂಕಿಯ ಪಂಜನ್ನು ಹಿಡಿದುಕೊಂಡಿದ್ದಾರೆ. ಮತ್ತೊಂದು ಕೈಯಲ್ಲಿ ಪೆಟ್ರೋಲ್ ಹಿಡಿದುಕೊಂಡಿದ್ದಾರೆ. ಜೊತೆಗೆ ಬಾಯಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬೆಂಕಿಯಿದ್ದ ಪಂಜಿನತ್ತ ಉಗುಳಿದ್ದಾನೆ. ಈ ವೇಳೆ ಉಗಿದ ಪೆಟ್ರೋಲ್ ಆತನ ಗಡ್ಡಕ್ಕೆ ಬಿದ್ದು, ಗಡ್ಡಕ್ಕೆ ಬೆಂಕಿ ಹತ್ತಿಕೊಂಡಿದೆ. ನಂತರ ಮುಖಕ್ಕೂ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಸಮೀಪದಲ್ಲಿ ಇರುವ ಯುವಕರು ಆತನ ಬಳಿ ಬಂದು ಬೆಂಕಿ ನಂದಿಸಿದ್ದಾರೆ.

ಇನ್ನು ಈ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅನೇಕರು ಆತನಿಗೆ ಬೈದಿದ್ದಾರೆ. ಒಂದಿಷ್ಟು ಜನ ಆತ ಹೇಗಿದ್ದಾನೆ ಎಂಬೆಲ್ಲಾ ಪ್ರಶ್ನೆ ಮಾಡಿದ್ದಾರೆ. ಬೆಂಕಿಯ ಜೊತೆ ಆಟ ಒಳ್ಳೆದಲ್ಲ ಎಂಬ ಮಾತನ್ನೂ ಹೇಳಿದ್ದಾರೆ. ಒಂದು ಸ್ವಲ್ಪ ಹೆಚ್ಚು ಕಡಿಮೆ ಆಗಿದ್ರೆ ಈ ಯುವಕ ಜೀವಕ್ಕೆ ಕುತ್ತು ತಂದು ಕೊಳ್ತಿದ್ದ. ಅದೃಷ್ಟವಶಾತ್ ಬಚಾವ್ ಆಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...