alex Certify ಸೌಂದರ್ಯ ವರ್ಧಕ ಮತ್ತು ಕೇಶವರ್ಧಕ ಬಾರೆ ಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ವರ್ಧಕ ಮತ್ತು ಕೇಶವರ್ಧಕ ಬಾರೆ ಹಣ್ಣು

ಬಾರೆಹಣ್ಣು ಪ್ರಮುಖ ಹಣ್ಣುಗಳ ಪೈಕಿ ಒಂದು. ಇದನ್ನು ಬಡವರ ಸೇಬು ಎಂದು ಕರೆಯಲಾಗುತ್ತದೆ. ಬಾರೆಹಣ್ಣನ್ನು ಜೇನಿನೊಂದಿಗೆ ಬೆರೆಸಿ ಸೇವಿಸಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಬೇಯಿಸಿ ತಿನ್ನಲು ಇಷ್ಟಪಡುತ್ತಾರೆ.

ಮಕ್ಕಳಿಗೆ ಈ ಹಣ್ಣು ಎಂದರೆ ಪಂಚಪ್ರಾಣ. ಇದರ ಉಪಯುಕ್ತತೆಗಳು ಹತ್ತು-ಹಲವು. ಈ ಹಣ್ಣು ಅತ್ಯುತ್ತಮ ಸೌಂದರ್ಯವರ್ಧಕ ಹಾಗೂ ಕೇಶ ವರ್ಧಕವೂ ಹೌದು.

ಬಾರೆ ಹಣ್ಣುಗಳನ್ನು ಚೆನ್ನಾಗಿ ಒಣಗಿಸಿ ಅವುಗಳನ್ನು ಬೆಂಕಿಯಲ್ಲಿ ಸುಟ್ಟು, ಆ ಬೂದಿಯನ್ನು ನೀರಿನಲ್ಲಿ ಕಲಸಿಕೊಳ್ಳಬೇಕು. ಈ ಮಿಶ್ರಣವನ್ನು ಮುಖದ ಮೊಡವೆಗಳ ಮೇಲೆ ಲೇಪಿಸಿಕೊಂಡರೆ ಮೊಡವೆಗಳು ನಿವಾರಣೆಯಾಗುತ್ತವೆ. ಬಾರೆ ಬೀಜದೊಳಗಿನ ಹೊಟ್ಟನ್ನು ಪುಡಿ ಮಾಡಿ ಅದಕ್ಕೆ ಕಾಲುಭಾಗ ಅರಿಶಿಣ ಬೆರೆಸಿ ಮೊಡವೆಗಳ ಮೇಲೆ ಲೇಪಿಸಿಕೊಂಡರೆ ಮೊಡವೆಗಳು ನಿವಾರಣೆಯಾಗುತ್ತವೆ.

ನೆಲ್ಲಿಕಾಯಿ ರಸದೊಡನೆ ಬಾರೆಹಣ್ಣಿನ ಎಲೆಗಳನ್ನು ಅರೆದು ಅದನ್ನು ತಲೆಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಸಮೃದ್ಧವಾಗಿ ಬೆಳೆಯುವುದರ ಜೊತೆಗೆ ಮೃದುವಾಗಿ ಕಾಂತಿಯುತವಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಕೂದಲು ನೆರೆಯುವುದನ್ನು ಬಾರೆಹಣ್ಣಿನ ಸೇವನೆಯಿಂದ ಮತ್ತು ಅದರ ಎಲೆಗಳನ್ನು ನುಣ್ಣಗೆ ಅರೆದು ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ತಡೆಗಟ್ಟಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...