alex Certify ʼಸೌಂದರ್ಯʼಕ್ಕೆ ಸಂಬಂಧಪಟ್ಟ ಈ ಸಲಹೆಗಳನ್ನು ಅನುಸರಿಸುವ ಮುನ್ನ ಇರಲಿ ಎಚ್ಚರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೌಂದರ್ಯʼಕ್ಕೆ ಸಂಬಂಧಪಟ್ಟ ಈ ಸಲಹೆಗಳನ್ನು ಅನುಸರಿಸುವ ಮುನ್ನ ಇರಲಿ ಎಚ್ಚರ…..!

ಚೆಂದವಾಗಿ ಕಾಣಲು ವಿವಿಧ ಸೌಂದರ್ಯ ಸಲಹೆಗಳನ್ನು ಅನುಸರಿಸುತ್ತೇವೆ. ಆದರೆ ಎಚ್ಚರದಿಂದಿರಿ ಕೆಲವು ಸಲಹೆಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡಬಹುದು. ಅದು ಯಾವುದು ಎಂಬುದನ್ನು ತಿಳಿದುಕೊಳ್ಳಿ.

ಕೆಲವರು ಎಣ್ಣೆಯುಕ್ತ ಚರ್ಮದ ಮೇಲೆ ತೈಲವನ್ನು ಹಚ್ಚಬೇಡಿ ಎಂದು ಹೇಳುತ್ತಾರೆ. ಆದರೆ ಆಯಿಲ್ ಸ್ಕಿನ್ ನವರು ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮವು ಎಣ್ಣೆ ಉತ್ಪಾದನೆ ಕಡಿಮೆ ಮಾಡುತ್ತದೆ.

ಪ್ರತಿದಿನ ಮೇಕಪ್ ಮಾಡುವುದರಿಂದ ಸ್ಕಿನ್ ಗೆ ಹಾನಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಪ್ರತಿದಿನ ಮುಖಕ್ಕೆ ಮೇಕಪ್ ಹಚ್ಚುವುದರಿಂದ ಅದರಲ್ಲಿರುವ ಅಂಶಗಳು ಸೂರ್ಯ ಬಿಸಿಲಿನಿಂದ ಮತ್ತು ಪರಿಸರದಲ್ಲಿರುವ ಹಾನಿಕಾರಗಳಿಂದ ನಮ್ಮ ಮುಖದ ಚರ್ಮವನ್ನು ರಕ್ಷಿಸುತ್ತದೆ. ಆದರೆ ರಾತ್ರಿ ವೇಳೆ ಮಾತ್ರ ಮೇಕಪ್ ಹಚ್ಚಬಾರದು, ಇದರಿಂದ ಚರ್ಮಕ್ಕೆ ಉಸಿರಾಡಲು ಆಮ್ಲಜನಕದ ಕೊರತೆ ಉಂಟಾಗುತ್ತದೆ.

ಹಾಗೇ ಮುಖಕ್ಕೆ ಒಂದೇ ವಿಧವಾದ ಕ್ರಿಂನ್ನು ಹಚ್ಚುತ್ತಾರೆ. ಆದರೆ ಹೀಗೆ ಮಾಡಬಾರದು. ಯಾಕೆಂದರೆ ಕ್ರಿಂ ಮುಖಕ್ಕೆ ಹೊಂದಿಕೊಳ್ಳುತ್ತದೆ, ಆನಂತರದಲ್ಲಿ ಅವು ಪರಿಣಾಮವನ್ನು ಬೀರುವುದು ಕಡಿಮೆಯಾಗುತ್ತದೆ. ಆದ ಕಾರಣ ಕ್ರೀಂನ್ನು ಬದಲಾಯಿಸುತ್ತಿರಬೇಕು.

ಸುಕ್ಕುಗಟ್ಟುವುದನ್ನು ತಡೆಗಟ್ಟಲು ನೀರನ್ನು ಹೆಚ್ಚಾಗಿ ಸೇವಿಸುವಂತೆ ಸೂಚಿಸುತ್ತಾರೆ. ಆದರೆ ಹೊರಗಿನ ಚರ್ಮಕೋಶಗಳು ಸತ್ತಾಗ ಒಳಗಿನ ಕೋಶಗಳು ತೇವಾಂಶವನ್ನು ಹೀರಿಕೊಳ್ಳುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...