ಭಾರತದಲ್ಲಿ ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಟೂರ್ನಿ ನಡೆಯುತ್ತಿದ್ದು, ಗುರುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಮಹಾಬಲಿಪುರಂನಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅವರು ಧರಿಸಿದ್ದ ಉಡುಗೆ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ನರೇಂದ್ರ ಮೋದಿಯವರು ತೊಟ್ಟಿದ್ದ ಪಂಚೆ ಮತ್ತು ಶಾಲ್ ಮೇಲೆ ಚೆಸ್ ಬೋರ್ಡ್ ಮಾದರಿಯಲ್ಲಿ ಬಿಳಿ ಮತ್ತು ಕಪ್ಪು ಚೌಕಗಳು ಇದ್ದು, ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಪೂರಕವಾದಂತಿತ್ತು.
ಯಾವುದೇ ಸಮಾರಂಭಕ್ಕೆ ಹೋದರೂ ಸಹ ಪ್ರಧಾನಿ ನರೇಂದ್ರ ಮೋದಿಯವರು ಅದಕ್ಕೆ ಪೂರಕವಾಗುವಂತಹ ಉಡುಗೆಗಳನ್ನು ಧರಿಸುತ್ತಾರೆ. ಈ ಹಿಂದೆಯೂ ಅವರು ಧರಿಸಿದ್ದ ಉಡುಗೆಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹಾಗೆಯೇ ಈ ಫೋಟೋ ಕೂಡ ಈಗ ಎಲ್ಲರ ಗಮನ ಸೆಳೆದಿದೆ.