ತುಮಕೂರು : ಸೋಲಾರ್ ಪಾರ್ಕ್ ನಿರ್ಮಿಸುವುದಕ್ಕಾಗಿ ಜಿಲ್ಲೆಯ ರೈತರು, ಕಂಪನಿಯೊಂದಕ್ಕೆ ತಮ್ಮ ಜಮೀನು ಬಾಡಿಗೆ ನೀಡಿದ್ದರು. ಆದರೆ, ಕಂಪನಿಯವರು ಆ ಜಮೀನನ್ನೇ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿರುವ ಆರೋಪ ಕೇಳಿ ಬಂದಿದೆ.
ಈ ಕುರಿತು ಆರೋಪಿಸಿರುವ ರೈತರು ತಾಲೂಕಿನ ತಿರುಮಣಿಯಲ್ಲಿ ಇರುವ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಎದುರು ಪ್ರತಿಭಟನೆ ನಡೆಸಿದ್ದಾರೆ. ಸೋಲಾರ್ ಪಾರ್ಕ್ ನಿರ್ಮಾಣ ಮಾಡಬೇಕಾದರೆ ಗುತ್ತಿಗೆ ಆಧಾರದ ಮೇಲೆ ರೈತರ ಜಮೀನು ಪಡೆಯಬೇಕು. ಆದರೆ, ಅದನ್ನು ಪರಭಾರೆ ಮಾಡುವಂತಿಲ್ಲ. ಅಂತಹ ಜಮೀನಿನ ಮೇಲೆ ಸಾಲ ಪಡೆಯುವಂತಿಲ್ಲ ಎಂಬ ನಿಯಮವಿದೆ.
IAF ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿನ ಸೇನಾ ಆಸ್ಪತ್ರೆಗೆ ಶಿಫ್ಟ್
ಆದರೆ, ಇಲ್ಲಿ ಕಂಪನಿಯು ಕಾನೂನು ಉಲ್ಲಂಘಿಸಿ ಸಾಲ ಪಡೆದಿದೆ ಎಂದು ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸದಾಶಿವರೆಡ್ಡಿ, ಪ್ರಧಾನ ಕಾರ್ಯದರ್ಶಿ ಆರ್.ಪಿ. ಸಾಂಬಸದಾಶಿವರೆಡ್ಡಿ ಆರೋಪಿಸಿ, ಪ್ರತಿಭಟನೆ ನಡೆಸಿದ್ದಾರೆ.
ರೈತರಿಗೆ ಮೋಸ ಮಾಡಿರುವ ಈ ಕಂಪನಿಯ ಗುತ್ತಿಗೆಯನ್ನು ಮೂರು ದಿನಗಳಲ್ಲಿ ರದ್ದು ಪಡಿಸಬೇಕು. ಇಲ್ಲವಾದರೆ ಹೋರಾಟ ಕೈಗೊಳ್ಳಲಾಗುವುದು ಎಂದು ರೈತರು ಹೇಳಿದ್ದಾರೆ.