
ಟ್ವಿಟ್ಟರ್ ಪೋಸ್ಟ್‌ನಲ್ಲಿ ಸ್ವಿಗ್ಗಿ, ಸೋಮವಾರದ ಬಗ್ಗೆ ವಾಗ್ದಾಳಿ ನಡೆಸಿದೆ. ಹಿಂದಿಯಲ್ಲಿ ಸೋಮವಾರವನ್ನು ಸೋಮ್ವಾರ್ ಎಂದು ಕರೆಯುತ್ತಾರೆ. ಏಕೆಂದರೆ, ಇದು ನೀವು ಯುದ್ಧವನ್ನು ಮಾಡುತ್ತಿರುವಂತೆ ತೋರುತ್ತದೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ. ನೀವು ಪ್ರಸ್ತುತ ಕೆಲಸ ಮಾಡುತ್ತಿದ್ರೆ, ಆ ಗಡುವನ್ನು ಪೂರೈಸಲು ಶ್ರಮಿಸುತ್ತಿದ್ದರೆ, ಈ ಟ್ವೀಟ್ ನಿಮಗೆ ನಿಜ ಅಂತಾನೇ ಅನಿಸುತ್ತದೆ.
ಈ ಪೋಸ್ಟ್ ಸಾಕಷ್ಟು ಲೈಕ್ ಗಳು ಮತ್ತು ಅನೇಕ ಪ್ರತಿಕ್ರಿಯೆಗಳನ್ನು ತ್ವರಿತವಾಗಿ ಗಳಿಸುತ್ತಿದೆ. ಹಲವು ರೀತಿಯ ವಿವರಣೆಯನ್ನು ಹಂಚಿಕೊಳ್ಳುವುದರಿಂದ ಹಿಡಿದು ಸೋಮವಾರಗಳ ಪರಿಕಲ್ಪನೆಯನ್ನು ಸರಳವಾಗಿ ತಳ್ಳಿಹಾಕುವವರೆಗೆ, ನೆಟ್ಟಿಗರು ದರಿದ್ರ ದಿನ ಅಂತೆಲ್ಲಾ ಬಹಳಷ್ಟು ವಿವರಣೆಯನ್ನು ನೀಡಿದ್ದಾರೆ.