alex Certify ಸೋನಾಕ್ಷಿ ಸಿನ್ಹಾ – ಜಹೀರ್ ಪ್ರೇಮ್‌ ಕಹಾನಿ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನಾಕ್ಷಿ ಸಿನ್ಹಾ – ಜಹೀರ್ ಪ್ರೇಮ್‌ ಕಹಾನಿ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ..!

ಬಾಲಿವುಡ್‌ನಲ್ಲಿ ಗಾಸಿಪ್ ಕಾಮನ್, ಕ್ಷಣಕ್ಷಣಕ್ಕೂ ಗಾಸಿಪ್ ಹುಟ್ಟಿಕೊಳ್ತಾನೇ ಇರುತ್ತೆ. ಅವರ ಜೊತೆ ಇವರ ಅಫೇರ್, ಇನ್ನೊಬ್ಬರದ್ದು ಲವ್ ಬ್ರೇಕ್ಅಪ್, ಇಂತಹದ್ದೇ ಗಾಳಿ ಸುದ್ದಿ ಆಗಾಗ ಹುಟ್ಟಿಕೊಳ್ತಾನೇ ಇರುತ್ತೆ. ಈಗ ಮತ್ತೆ ಅಂತಹದ್ದೇ ಒಂದು ಗಾಸಿಪ್ ಹುಟ್ಟಿಕೊಂಡಿದೆ. ಈ ಗಾಸಿಪ್‌ಗೆ ಈ ಬಾರಿ ಟಾರ್ಗೆಟ್ ಆಗಿದ್ದು ಸೋನಾಕ್ಷಿ ಸಿನ್ಹಾ.

ಬಾಲಿವುಡ್ ದಬಾಂಗ್ ಹಿರೋಯಿನ್ ಅಂತಾನೇ ಫೇಮಸ್ ಆಗಿರೋ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ತಮ್ಮ ಲವ್ ಲೈಫ್‌ನಿಂದ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸೋನಾಕ್ಷಿ, ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋವನ್ನ ಪೋಸ್ಟ್ ಮಾಡಿದ್ದರು. ಆ ಫೋಟೊದಲ್ಲಿ ಸೋನಾಕ್ಷಿ ಧರಿಸಿರೋ ವಿಶೇಷ ಉಂಗುರ ಹೈಲೈಟ್ ಆಗಿತ್ತು. ಅದನ್ನ ನೋಡಿದ್ರೆ ಸೋನಾಕ್ಷಿ ನಿಶ್ಚಿತಾರ್ಥ ಮಾಡಿಕೊಂಡರೋ ಏನೋ ಅನ್ನೊ ಅನುಮಾನ ಹುಟ್ಟು ಹಾಕೋ ಹಾಗಿತ್ತು. ಆದರೆ ಇದರ ಬಗ್ಗೆ ಸೋನಾಕ್ಷಿ ಸಿನ್ಹಾ ಆಗಲಿ ಇಲ್ಲಾ ಅವರ ಕುಟುಂಬದವರು ಇನ್ನೂ ಎಲ್ಲೂ ಏನೂ ಹೇಳಿಕೊಂಡಿಲ್ಲ.

ಕಳೆದ ಕೆಲವು ದಿನಗಳಿಂದ ಸೋನಾಕ್ಷಿ ಸಿನ್ಹಾ ಹೆಸರು ನಟ ಜಹೀರ್ ಇಕ್ಬಾಲ್ ಅವರ ಜೊತೆ ಕೇಳಿ ಬಂದಿದೆ. ಇವರಿಬ್ಬರೂ ಇದನ್ನ ಕೇವಲ ಫ್ರೆಂಡ್‌ಶಿಪ್‌ ಅಂತ ಹೇಳಿದರೂ, ಅದನ್ನು ಯಾರೂ ನಂಬ್ತಾ ಇಲ್ಲ. ಪ್ರೀತಿ ಬಚ್ಚಿಟ್ಟಷ್ಟು ಬೇರೆಯವರ ಕಣ್ಣಿಗೆ ಬೇಗನೇ ಕಾಣಿಸಿಕೊಳ್ಳುತ್ತೆ. ಸೋನಾಕ್ಷಿ ಸಿನ್ಹಾ ವಿಷಯದಲ್ಲೂ ಈಗ ಅದೇ ಆಗ್ತಿರೋದು.

ಇದೇ ಜೂನ್ 2 ರಂದು ಸೋನಾಕ್ಷಿ ಜನ್ಮ ದಿನವಾಗಿತ್ತು. ಕೆಲ ದಿನಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ಜಹೀರ್ ಒಂದು ಫೋಟೋವನ್ನ ಪೋಸ್ಟ್ ಮಾಡಿದ್ದರು. ಈ ಫೋಟೋವನ್ನ ಕೊಂಚ ತಡವಾಗಿ ಪೋಸ್ಟ್ ಮಾಡಿದ್ದರೂ ಅದರಲ್ಲಿ ಬರೆದ ಪ್ರೀತಿಯ ಸಂದೇಶ ಜಹೀರ್, ಸೋನಾಕ್ಷಿಗಂತಾನೇ ಆ ಪ್ರೀತಿಯ ಸಾಲುಗಳು ಬರೆದಂತಿತ್ತು. ಇದಿಷ್ಟು ಸಾಕಾಗಿತ್ತು ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಅಂತ ಗೊತ್ತಾಗೋಕೆ.

ಜಹೀರ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರೋ ಈ ವಿಡಿಯೋ, ಸೋನಾಕ್ಷಿ ಜೊತೆ ಕಳೆದ ತಮಾಷೆಯ ಕ್ಷಣಗಳಾಗಿವೆ. ಇದೇ ವಿಡಿಯೋ ಕ್ಯಾಪ್ಷನ್ನಲ್ಲಿ ‘ ಹುಟ್ಟು ಹಬ್ಬದ ಶುಭಾಶಯಗಳು ಸೋನ್ಜ್….. ನನ್ನನ್ನು ಕೊಲ್ಲದಿರುವುದಕ್ಕೆ ಥ್ಯಾಂಕ್ಯೂ, ಐ ಲವ್ ಯೂ, ನಿನಗೆ ನೀನಿಷ್ಟ ಪಡುವ ತಿಂಡಿ, ಫ್ಲೈಟ್ಸ್, ಪ್ರೀತಿ ಮತ್ತು ಖುಷಿ ಸಿಗುತ್ತಲಿರಲಿ‘ ಇದೇ ಸಂದೇಶಕ್ಕೆ ಪ್ರತ್ಯುತ್ತರವಾಗಿ ‘ ಥ್ಯಾಂಕ್ಯೂ… ಲವ್ ಯೂ ಮತ್ತು ಈಗ ನಾನು ನಿನ್ನನ್ನ ಕೊಲ್ಲುವುದಕ್ಕೆ ಬರ್ತಾ ಇದ್ದೇನೆ. ಅಂತ ಸೋನಾಕ್ಷಿ ರಿಪ್ಲೈ ಕೊಟ್ಟಿದ್ದಾರೆ. ಇವರಿಬ್ಬರ ಈ ತಮಾಷೆಯ ಹಾಗೂ ಪ್ರೀತಿ ತುಂಬಿದ ಮೆಸೇಜ್‌ನ್ನ ನೋಡಿ ಅಭಿಮಾನಿಗಳು ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾರೆ.

ಸೋನಾಕ್ಷಿ ಹಾಗೂ ಜಹೀರ್ ‘ಡಬಲ್ ಎಕ್ಸ್ ಎಂ‘ ಸಿನೆಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ನಟ ಜಹೀರ್, ಸಲ್ಮಾನ್‌ಖಾನ್‌ ಅವರ ‘ದಿ ನೋಟ್ ಬುಕ್‘ ಸಿನೆಮಾದಲ್ಲಿಯೂ ನಟಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...