alex Certify ಸೊಪ್ಪಿನ ಖಾದ್ಯ ತಯಾರಿಸುವಾಗ ಗಮನದಲ್ಲಿರಲಿ ಈ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಪ್ಪಿನ ಖಾದ್ಯ ತಯಾರಿಸುವಾಗ ಗಮನದಲ್ಲಿರಲಿ ಈ ಅಂಶ

ಸೊಪ್ಪಿನ ಪಲ್ಯ ಅಥವಾ ಇತರ ಯಾವುದೇ ಖಾದ್ಯಗಳೆಂದರೆ ಎಲ್ಲರಿಗೂ ಇಷ್ಟ. ಆದರೆ ಇತರ ತರಕಾರಿಗಳಂತೆ ಸೊಪ್ಪನ್ನು ಕತ್ತರಿಸುವುದು ಸುಲಭವಲ್ಲ. ಅದನ್ನು ಒಂದೊಂದಾಗಿ ಬಿಡಿಸಿ, ಮಣ್ಣು, ಮರಳಿಲ್ಲದಂತೆ ತೊಳೆದು ಕತ್ತರಿಸುವುದೆಂದರೆ ದೊಡ್ಡ ತಲೆ ನೋವು. ತರಹೇವಾರಿ ಸೊಪ್ಪುಗಳನ್ನು ಕತ್ತರಿಸುವಾಗ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಕೆಲಸ ಸುಲಭವಾಗುತ್ತದೆ.

* ಸೊಪ್ಪುಗಳಿಂದ ಬೇರುಗಳನ್ನು ತೆಗೆದು ಬೇರ್ಪಡಿಸಿ ನಂತರ ಸಮಪ್ರಮಾಣದಲ್ಲಿ ಎಲ್ಲಾ ಸೊಪ್ಪನ್ನು ಜೋಡಿಸಿಕೊಂಡರೆ ಕತ್ತರಿಸಲು ಬಹಳ ಸುಲಭವಾಗುತ್ತದೆ.

* ಸೊಪ್ಪನ್ನು ತೊಳೆದು ನಂತರ ಕತ್ತರಿಸಿದರೆ ಅದರಲ್ಲಿರುವ ಜೀವಸತ್ವಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಕತ್ತರಿಸಿ ನಂತರ ತೊಳೆದರೆ ಸಂಪೂರ್ಣವಾಗಿ ಅದರಲ್ಲಿರುವ ಜೀವಸತ್ವಗಳು ನಾಶವಾಗುತ್ತದೆ.

* ಸೊಪ್ಪನ್ನು ಕತ್ತರಿಸಿದ ನಂತರ ಅದಕ್ಕೆ ಚಿಟಿಕೆ ಉಪ್ಪು ಹಾಕಿ 5 ನಿಮಿಷ ಪಾತ್ರೆಯಲ್ಲಿ ಹಾಗೆಯೇ ಇಟ್ಟು , ನಂತರ ಬೇಯಿಸಿದರೆ ಅದರ ಸ್ವಾದ, ಪರಿಮಳ ಕಳೆದುಕೊಳ್ಳುವುದಿಲ್ಲ.

* ಮೆಂತ್ಯ, ಸಬ್ಬಸಿಗೆ, ದಂಟು ಮುಂತಾದ ಸೊಪ್ಪನ್ನು ನೇರವಾಗಿ ನೀರಿಗೆ ಹಾಕಿ ಬೇಯಿಸಲು ಹೋಗಬೇಡಿ. ಎಣ್ಣೆಯಲ್ಲಿ 5 ನಿಮಿಷ ಕರಿದು ನಂತರ ಬೇಯಿಸಿದರೆ ತಳ ಹಿಡಿಯುವುದಿಲ್ಲ.

* ಸಾಂಬಾರು ಅರ್ಧ ಬೆಂದ ನಂತರ ಸೊಪ್ಪನ್ನು ಅದರೊಳಗೆ ಬೇಯಿಸಲು ಹಾಕಿದರೆ ಉತ್ತಮ. ಯಾಕೆಂದರೆ ಸೊಪ್ಪು ಬೇಗ ಬೆಂದು ಹೋಗುತ್ತದೆ.

* ಸೊಪ್ಪುಗಳನ್ನು ಸಾಧ್ಯವಾದಷ್ಟು ದಪ್ಪವಾಗಿ ಕತ್ತರಿಸಿ. ಇದರಿಂದ ಅದು ತಿನ್ನುವಾಗ ಬಾಯಿಗೆ ಸಿಗುತ್ತದೆ. ಇಲ್ಲವಾದರೆ ಅದು ಕಲಸಿ ಹೋಗಿರುತ್ತದೆ.

* ಸೊಪ್ಪಿನ ಪಲ್ಯ, ಸಾಂಬಾರುಗಳಿಗೆ ಹುಳಿಯನ್ನು ಸಲ್ವ ಹೆಚ್ಚಾಗಿ ಹಾಕಿ ಹಾಗೂ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಹಾಕಿದರೆ ರುಚಿ ಹೆಚ್ಚುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...