alex Certify ಸೇನೆಯಲ್ಲೂ ಗುರುತಿಸಿಕೊಂಡಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರರು; ದೇಶಕ್ಕೆ ಹೆಮ್ಮೆ ತಂದ ಕ್ರಿಕೆಟರ್ಸ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇನೆಯಲ್ಲೂ ಗುರುತಿಸಿಕೊಂಡಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರರು; ದೇಶಕ್ಕೆ ಹೆಮ್ಮೆ ತಂದ ಕ್ರಿಕೆಟರ್ಸ್‌….!

ಇಂದು ನಮಗೆಲ್ಲ 74ನೇ ಗಣರಾಜ್ಯೋತ್ಸವದ ಸಡಗರ. ಈ ವಿಶೇಷ ಸಂದರ್ಭದಲ್ಲಿ  ದೇಶಕ್ಕಾಗಿ ಎರಡೆರಡು ಜವಾಬ್ಧಾರಿ ನಿರ್ವಹಿಸಿರುವ ಟೀಂ ಇಂಡಿಯಾದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. ಆಟದ ಜೊತೆಗೆ ದೇಶದ ಭದ್ರತೆಗೂ ಕೊಡುಗೆ ನೀಡಿದ ಕ್ರಿಕೆಟಿಗರು ಇವರು.

ಮಹೇಂದ್ರ ಸಿಂಗ್‌ ಧೋನಿ: ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಬಾಲ್ಯದಿಂದಲೂ ಸೈನ್ಯಕ್ಕೆ ಸೇರಲು ಬಯಸಿದ್ದರು. ಬಿಡುವಿನ ವೇಳೆಯಲ್ಲಿ ಭಾರತೀಯ ಸೇನೆಯ ಯುವಕರ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ಅತ್ಯುತ್ತಮ ಕ್ರಿಕೆಟಿಗನಾಗಿ, ಯಶಸ್ವಿ ನಾಯಕನಾಗಿ ಗುರುತಿಸಿಕೊಂಡ ಧೋನಿ, ಕೊನೆಗೂ ಸೇನೆ ಸೇರಬೇಕೆಂಬ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. 2015 ರಲ್ಲಿ ಧೋನಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡರು.

ಕಪಿಲ್‌ ದೇವ್‌ : ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಕೂಡ ಸೇನೆಯಲ್ಲಿದ್ದಾರೆ. ಕಪಿಲ್ ದೇವ್ ಅವರಿಗೆ 2008ರಲ್ಲಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಯಿತು. ಇದಲ್ಲದೆ, 2019 ರಲ್ಲಿ, ಕಪಿಲ್ ದೇವ್ ಅವರನ್ನು ಹರಿಯಾಣ ಕ್ರೀಡಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಲಾಯಿತು.

ಸಚಿನ್‌ ತೆಂಡೂಲ್ಕರ್‌: ಸೇನೆ ಸೇರಿರುವ ಕ್ರಿಕೆಟಿಗರ ಪಟ್ಟಿಯಲ್ಲಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಕೂಡ ಇದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು 2010 ರಲ್ಲಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಗಿ ನೇಮಿಸಲಾಯಿತು.

ಹರ್ಭಜನ್‌ ಸಿಂಗ್‌: ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್, ಪಂಜಾಬ್ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ಹೊಂದಿದ್ದರು. ಸದ್ಯ ರಾಜ್ಯಸಭಾ ಸಂಸದರೂ ಆಗಿದ್ದಾರೆ.

ಜೋಗಿಂದರ್‌ ಶರ್ಮಾ: ಟೀಮ್ ಇಂಡಿಯಾ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ಗೆಲುವಿನಲ್ಲಿ ಜೋಗಿಂದರ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಹೆಚ್ಚು ಕಾಲ ಅವರು ತಂಡದ ಭಾಗವಾಗಿ ಉಳಿಯಲಿಲ್ಲ. ಅವರನ್ನು ಟೀಮ್‌ನಿಂದ ಕೈಬಿಡಲಾಯ್ತು. ಸದ್ಯ ಜೋಗಿಂದರ್ ಹರಿಯಾಣ ಪೊಲೀಸ್‌ ಇಲಾಖೆಯಲ್ಲಿ ಡಿಸಿಪಿ ಹುದ್ದೆ ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...