ಕಪಿಲ್ ದೇವ್ : ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಕೂಡ ಸೇನೆಯಲ್ಲಿದ್ದಾರೆ. ಕಪಿಲ್ ದೇವ್ ಅವರಿಗೆ 2008ರಲ್ಲಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಯಿತು. ಇದಲ್ಲದೆ, 2019 ರಲ್ಲಿ, ಕಪಿಲ್ ದೇವ್ ಅವರನ್ನು ಹರಿಯಾಣ ಕ್ರೀಡಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಲಾಯಿತು.
ಸಚಿನ್ ತೆಂಡೂಲ್ಕರ್: ಸೇನೆ ಸೇರಿರುವ ಕ್ರಿಕೆಟಿಗರ ಪಟ್ಟಿಯಲ್ಲಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಕೂಡ ಇದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು 2010 ರಲ್ಲಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಗಿ ನೇಮಿಸಲಾಯಿತು.
ಹರ್ಭಜನ್ ಸಿಂಗ್: ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್, ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ಹೊಂದಿದ್ದರು. ಸದ್ಯ ರಾಜ್ಯಸಭಾ ಸಂಸದರೂ ಆಗಿದ್ದಾರೆ.
ಜೋಗಿಂದರ್ ಶರ್ಮಾ: ಟೀಮ್ ಇಂಡಿಯಾ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ಗೆಲುವಿನಲ್ಲಿ ಜೋಗಿಂದರ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಹೆಚ್ಚು ಕಾಲ ಅವರು ತಂಡದ ಭಾಗವಾಗಿ ಉಳಿಯಲಿಲ್ಲ. ಅವರನ್ನು ಟೀಮ್‌ನಿಂದ ಕೈಬಿಡಲಾಯ್ತು. ಸದ್ಯ ಜೋಗಿಂದರ್ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ ಹುದ್ದೆ ಹೊಂದಿದ್ದಾರೆ.