alex Certify ಸೆಪ್ಟೆಂಬರ್ 24ಕ್ಕೆ ಬಿಡುಗಡೆಯಾಗಲಿದೆ ʼಬಾಂಡ್ ರವಿʼ ಟೀಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಪ್ಟೆಂಬರ್ 24ಕ್ಕೆ ಬಿಡುಗಡೆಯಾಗಲಿದೆ ʼಬಾಂಡ್ ರವಿʼ ಟೀಸರ್

ಪ್ರಜ್ವಲ್ ನಿರ್ದೇಶನದ  ‘ಬಾಂಡ್ ರವಿ’ ಚಿತ್ರದ ಟೀಸರ್ ಸೆಪ್ಟೆಂಬರ್ 24ರಂದು ಸಂಜೆ 5 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತು ಚಿತ್ರತಂಡ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಇದೊಂದು ಎಮೋಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ

ಈ ಸಿನಿಮಾವನ್ನು ನರಸಿಂಹ ಮೂರ್ತಿ ನಿರ್ಮಾಣ ಮಾಡಿದ್ದು, ಉಡಾಳ್ ಬಾಬು ಎಂದೇ ಖ್ಯಾತಿ ಪಡೆದಿರುವ ಪ್ರಮೋದ್ ನಾಯಕನಾಗಿ ನಟಿಸಿದ್ದು, ಪ್ರಮೋದ್ ಗೆ ಜೋಡಿಯಾಗಿ ಕಾಜಲ್ ಕುಂದರ್ ಅಭಿನಯಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದು, ವಿಜಯ್ ಚೆಂಡೂರ್, ಶೋಭರಾಜ್, ರವಿ ಕಾಳೆ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...