alex Certify ಸೆಪ್ಟೆಂಬರ್ 23ಕ್ಕೆ ತೆರೆ ಮೇಲೆ ಬರಲಿದೆ ಶರಣ್ ನಟನೆಯ ‘ಗುರು ಶಿಷ್ಯರು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಪ್ಟೆಂಬರ್ 23ಕ್ಕೆ ತೆರೆ ಮೇಲೆ ಬರಲಿದೆ ಶರಣ್ ನಟನೆಯ ‘ಗುರು ಶಿಷ್ಯರು’

ಜಡೇಶ ಕೆ ಹಂಪಿ ನಿರ್ದೇಶನದ ಶರಣ್ ಅಭಿನಯದ ಬಹುನಿರೀಕ್ಷಿತ’ ‘ಗುರು ಶಿಷ್ಯರು’ ಚಿತ್ರ ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ತನ್ನ ಅಧಿಕೃತ ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದೆ.

ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ಶರಣ್ ಖೋ ಖೋ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯಿಸಿದ್ದಾರೆ.

ಲಡ್ಡು ಸಿನಿಮಾ ಹೌಸ್ ಬ್ಯಾನರ್ ನಡಿ ತರುಣ್ ಸುಧೀರ್ ಹಾಗೂ ಶರಣ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಶರಣ್, ಬುಲೆಟ್ ಪ್ರಕಾಶ್, ಶಾಸಕ ರಾಜುಗೌಡ ಹಾಗೂ ನೆನಪಿರಲಿ ಪ್ರೇಮ್ ಅವರ ಪುತ್ರರು ಸೇರಿದಂತೆ ಅಪೂರ್ವ ಕಾಸರವಳ್ಳಿ, ಸುರೇಶ್ ಹೆಬ್ಳೀಕರ್, ದತ್ತಣ್ಣ ಈ ಸಿನಿಮಾದಲ್ಲಿ  ಬಣ್ಣ ಹಚ್ಚಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...