ರಾಶಿಗನುಗುಣವಾಗಿ ಜನರ ಸ್ವಭಾವ ಕೂಡ ಬೇರೆ ಬೇರೆಯಾಗಿರುತ್ತದೆ. ನಿಮ್ಮ ರಾಶಿ, ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಸೆಕ್ಸ್ ಲೈಫ್ ಮೇಲೆಯೂ ರಾಶಿ ಪ್ರಭಾವ ಬೀರುತ್ತದೆ. ಲೈಂಗಿಕ ಸಮಸ್ಯೆಗೂ ರಾಶಿ ಕಾರಣವಾಗುತ್ತದೆ.
ಮೇಷ : ಇವರು ಆತುರ ಸ್ವಭಾವದವರು. ಸೆಕ್ಸ್ ವಿಚಾರದಲ್ಲೂ ಆತುರ. ನಿಧಾನ ಸಂಭೋಗ ಇವ್ರಿಗೆ ಇಷ್ಟವಿಲ್ಲ. ಇದು ಸಂಗಾತಿಗಳಿಗೆ ಸಮಸ್ಯೆ ತಂದೊಡ್ಡುತ್ತದೆ.
ವೃಷಭ : ಈ ರಾಶಿಯವರು ಹಠಮಾರಿ ಸ್ವಭಾವದವರು. ಇವ್ರಿಗೆ ಹೊಸ ಪ್ರಯತ್ನ ಇಷ್ಟವಾಗುವುದಿಲ್ಲ. ಸೆಕ್ಸ್ ಲೈಫ್ ನಲ್ಲಿ ಕೂಡ ಹೊಸ ಪ್ರಯತ್ನವನ್ನು ಇಷ್ಟಪಡುವುದಿಲ್ಲ. ತಮ್ಮ ನಿಯಮದಿಂದ ಇವ್ರು ಹೊರ ಹೋಗುವುದಿಲ್ಲ.
ಮಿಥುನ : ಈ ರಾಶಿಯವರು ಅಶ್ಲೀಲ ಮಾತು ಹಾಗೂ ಫ್ಲರ್ಟ್ ಮಾಡುವುದ್ರಲ್ಲಿ ಮುಂದಿರುತ್ತಾರೆ. ಸೆಕ್ಸ್ ವಿಚಾರಕ್ಕೆ ಬಂದ್ರೆ ಅವ್ರು ಬೇರೆ ಪ್ರಪಂಚಕ್ಕೆ ಹೋಗ್ತಾರೆ. ಸಂಭೋಗದಲ್ಲೂ ಆಲೋಚನೆ ಮಾಡ್ತಾರೆ. ಇದ್ರಿಂದ ಸಂಪೂರ್ಣ ತೃಪ್ತಿ ಸಿಗುವುದಿಲ್ಲ.
ಕರ್ಕ : ಹೆಚ್ಚು ಭಾವುಕರಾಗಿರುತ್ತಾರೆ ಈ ರಾಶಿಯವರು. ಸೆಕ್ಸ್ ಗಿಂತ ಮೇಕಿಂಗ್ ಲವ್ ಮೇಲೆ ಹೆಚ್ಚಿನ ಭರವಸೆ ಹೊಂದಿರುತ್ತಾರೆ. ಸೆಕ್ಸ್ ನಲ್ಲಿಯೂ ಭಾವುಕರಾಗ್ತಾರೆ.
ಸಿಂಹ : ಈ ರಾಶಿಯವರು ತುಂಬಾ ಸರಳವಾಗಿರುತ್ತಾರೆ. ಆದ್ರೆ ಸೆಕ್ಸ್ ವಿಚಾರದಲ್ಲಿ ಅವ್ರ ಕಾರ್ಯಕ್ಷಮತೆ ಬಗ್ಗೆಯೇ ಅವ್ರಿಗೆ ಚಿಂತೆ ಕಾಡುತ್ತದೆ. ಹಾಗಾಗಿ ಸಂಭೋಗದಲ್ಲಿ ಸುಖ ಅನುಭವಿಸಲು ಸಾಧ್ಯವಾಗುವುದಿಲ್ಲ.
ಕನ್ಯಾ : ಎಲ್ಲ ವಿಚಾರದ ಬಗ್ಗೆಯೂ ಹೆಚ್ಚಿಗೆ ಆಲೋಚನೆ ಮಾಡುವ, ಎಲ್ಲವನ್ನೂ ಲೆಕ್ಕ ಹಾಕುವ ಇವ್ರು ಸೆಕ್ಸ್ ವಿಚಾರದಲ್ಲಿಯೂ ಹಾಗೆ ಇರ್ತಾರೆ. ಸಂಗಾತಿ ಇಷ್ಟು ಪ್ರೀತಿ ಮಾಡಿದ ಹಾಗಾಗಿ ನಾನು ಅಷ್ಟೇ ಪ್ರೀತಿ ನೀಡ್ತೇನೆಂಬ ಅವ್ರ ಲೆಕ್ಕಾಚಾರ ಸಂಗಾತಿಗೆ ತೊಂದರೆಯಾಗುತ್ತದೆ.
ತುಲಾ : ಸಂಗಾತಿ ಬಗ್ಗೆ ಹೆಚ್ಚು ಆಲೋಚನೆ ಮಾಡುವ ಈ ರಾಶಿಯವರು ತಮ್ಮ ನೋವನ್ನು ಮರೆಯುತ್ತಾರೆ. ಸಂಗಾತಿ ಜೊತೆ ಸೆಕ್ಸ್ ಆಸೆಯನ್ನು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ಇದು ಅವ್ರ ಲೈಂಗಿಕ ಜೀವನ ಅಸಂತೋಷವಾಗಿರಲು ಕಾರಣವಾಗುತ್ತದೆ.
ವೃಶ್ಚಿಕ : ತುಂಬಾ ಸಂವೇದನಾಶೀಲರಾಗಿರುವ ಈ ರಾಶಿಯವರು ಸೆಕ್ಸ್ ಬಗ್ಗೆ ತುಂಬಾ ಬೇಡಿಕೆಗಳನ್ನು ಮುಂದಿಡುತ್ತಾರೆ. ಸಂಗಾತಿ ತೃಪ್ತಿ ನೀಡದೆ ಹೋದಲ್ಲಿ ಅವ್ರು ನಿರಾಶೆಗೊಳ್ತಾರೆ.
ಧನು : ಸಂಗಾತಿಗೆ ಮತ್ತೊಂದು ಅವಕಾಶ ನೀಡುವುದಿಲ್ಲ. ಸಂಗಾತಿ ತನ್ನನ್ನು ತೃಪ್ತಿಗೊಳಿಸದಿರಲು ಕಾರಣವೇನು ಎಂಬುದನ್ನು ತಿಳಿಯದೆ ಸಂಗಾತಿ ಮೇಲಿರುವ ನಿರೀಕ್ಷೆಯನ್ನು ಕೈ ಬಿಡುತ್ತಾರೆ.
ಮಕರ : ಈ ರಾಶಿಯವರು ಬೆಡ್ ರೂಮಿನಲ್ಲಿ ಆಲಸಿಗಳಾಗಿರುತ್ತಾರೆ. ಸಂಗಾತಿಯೇ ಎಲ್ಲವನ್ನೂ ಮಾಡಲಿ ಎಂದು ಬಯಸುತ್ತಾರೆ. ಸೆಕ್ಸ್ ನಲ್ಲಿ ಹೊಸ ಪ್ರಯೋಗ ಮಾಡುವುದು ಇವ್ರಿಗೆ ಇಷ್ಟವಿರುವುದಿಲ್ಲ.
ಕುಂಭ : ತುಂಬಾ ಮೂಡಿ ಸ್ವಭಾವ ಇವ್ರದ್ದು. ಯಾವುದೇ ಸಂದರ್ಭಕ್ಕೆ ಹೊಂದಿಕೊಳ್ಳಲು ತುಂಬಾ ಸಮಯ ಬೇಕು. ಸೆಕ್ಸ್ ಗಾಗಿ ತುಂಬಾ ಸಮಯದಿಂದ ತಯಾರಿ ನಡೆಸುತ್ತಾರೆ. ತಮ್ಮಿಷ್ಟದಂತೆ ನಡೆಯುತ್ತಾರೆ.
ಮೀನ : ಸೆಕ್ಸ್ ವಿಚಾರದಲ್ಲಿ ತುಂಬಾ ನಿರಾಶೆಗೊಳ್ಳುವ ಈ ರಾಶಿಯವರು ಹೊಸದನ್ನು ಪ್ರಯೋಗ ಮಾಡಲು ಬಯಸುತ್ತಾರೆ. ಹೊಸ ಪ್ರಯೋಗಕ್ಕೆ ಅವಕಾಶವಿಲ್ಲವೆಂದಾದ್ರೆ ಸೆಕ್ಸ್ ಬಿಡಲೂ ಇವ್ರು ಸಿದ್ಧವಿರುತ್ತಾರೆ.