alex Certify `ಸೆಕ್ಸ್ ನಿಂದ ಸಿಗುತ್ತೆ ಹೆಚ್ಚು ಶಕ್ತಿ’: ಸುದ್ದಿಯಲ್ಲಿದೆ ಚಿನ್ನದ ಪದಕ ವಿಜೇತೆ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`ಸೆಕ್ಸ್ ನಿಂದ ಸಿಗುತ್ತೆ ಹೆಚ್ಚು ಶಕ್ತಿ’: ಸುದ್ದಿಯಲ್ಲಿದೆ ಚಿನ್ನದ ಪದಕ ವಿಜೇತೆ ಹೇಳಿಕೆ

ರಷ್ಯಾದ ಒಲಿಂಪಿಕ್ ಚಾಂಪಿಯನ್ ಎಲಾ ಶಿಶ್ಕಿನಾ ಸದ್ಯ ಸುದ್ದಿಯಲ್ಲಿದ್ದಾರೆ. ಸೆಕ್ಸ್ ನನಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂದು ಎಲಾ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಕ್ರೀಡೆಗಳಲ್ಲಿ ತಮ್ಮ ಪರ್ಫಾರ್ಮೆನ್ಸ್ ನೀಡಲು ಸೆಕ್ಸ್ ಪ್ರಯೋಜನಕಾರಿ ಎಂದು ಎಲಾ ಶಿಶ್ಕಿನಾ ಹೇಳಿದ್ದಾರೆ.

ಎಲಾ ಶಿಶ್ಕಿನಾ, ವಿಶ್ವದ ಅಗ್ರ ಕ್ರೀಡಾಪಟುಗಳಲ್ಲಿ ಒಬ್ಬರು. ಎಲಾ, ಸೆಕ್ಸ್ ಒಂದು ವ್ಯಾಯಾಮದಂತಿದೆ ಎನ್ನುತ್ತಾರೆ. ಇದು ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ನೆರವಾಗುತ್ತದೆ. ನನ್ನ ಉತ್ತಮ ಪ್ರದರ್ಶನಕ್ಕೆ ಸೆಕ್ಸ್ ಕೂಡ ಮುಖ್ಯ ಕಾರಣವೆಂದು ಅವರು ಹೇಳಿದ್ದಾರೆ.

ಸ್ಪರ್ಧೆಯ ಮೊದಲ ಲೈಂಗಿಕತೆ, ಸ್ನಾಯುವಿನ ಬಲವನ್ನು ಹೆಚ್ಚಿಸುತ್ತದೆ. ಯಾವುದೇ ಆಟಗಾರನ ಕ್ರೀಡಾ ಆಕ್ರಮಣಕ್ಕೆ ಟೆಸ್ಟೋಸ್ಟೆರಾನ್ ಸಹಕಾರಿಯಾಗಿದೆ ಎಂದು ಎಲಾ ಹೇಳಿದ್ದಾರೆ. ಕ್ರೀಡೆ, ಲೈಂಗಿಕತೆ ಮತ್ತು ಫಿಟ್ನೆಸ್ ಬಗ್ಗೆ ಈಗಾಗಲೇ ಅನೇಕ ಬಾರಿ ಎಲಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2016 ರ ರಿಯೋ ಒಲಿಂಪಿಕ್ಸ್ ಮತ್ತು 2012 ಲಂಡನ್ ಒಲಿಂಪಿಕ್ಸ್ ನಲ್ಲಿ ಎಲಾ, ಚಿನ್ನದ ಪದಕ ಗೆದ್ದಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...