ಡಿಸೆಂಬರ್ 4ರಂದು ವರ್ಷದ ಕೊನೆಯ ಸೂರ್ಯಗ್ರಹಣ ನಡೆಯಲಿದೆ. ಇದರ ಪರಿಣಾಮ 12 ರಾಶಿಚಕ್ರದ ಮೇಲಾಗುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಶುಭವಾದರೆ, ಕೆಲವರಿಗೆ ಅಶುಭವಾಗಲಿದೆ. ಹಾಗಾದರೆ ಯಾವ ರಾಶಿಯವರಿಗೆ ಸೂರ್ಯಗ್ರಹಣದಿಂದ ಒಳಿತಾಗಲಿದೆ ಎಂಬುದನ್ನು ತಿಳಿದುಕೊಳ್ಳಿ.
ಮೇಷ- ತಮ್ಮ ಆರೋಗ್ಯ ಮತ್ತು ಅಪಘಾತಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
ವೃಷಭ – ವ್ಯವಹಾರ ಮತ್ತು ವೈವಾಹಿಕ ಜೀವನಕ್ಕೆ ಗಮನ ಕೊಡಿ.
ಮಿಥುನ- ಮಿಥುನ ರಾಶಿಯ ಜನರ ಸಮಸ್ಯೆ ಕೊನೆಗೊಳ್ಳಲಿದೆ.
ಕರ್ಕ – ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಹದಗೆಡಬಹುದು.
ಸಿಂಹ- ಅನಗತ್ಯ ಚಿಂತೆ ಮತ್ತು ವಿವಾದ ಕಾಡಬಹುದು.
ಕನ್ಯಾ- ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ.
ತುಲಾ- ಕೌಟುಂಬಿಕ ಜೀವನ ಮತ್ತು ಅಪಘಾತಗಳ ಬಗ್ಗೆ ಕಾಳಜಿ ವಹಿಸಬೇಕು.
ವೃಶ್ಚಿಕ– ಕೆಲಸ ಮತ್ತು ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು.
ಧನು- ಅಪಘಾತ ಮತ್ತು ವಿಫಲತೆಯಿಂದ ರಕ್ಷಿಸಿಕೊಳ್ಳುವ ಅಗತ್ಯವಿದೆ.
ಮಕರ- ದೊಡ್ಡ ಮತ್ತು ಪ್ರಯೋಜನಕಾರಿ ಬದಲಾವಣೆಯಾಗಲಿದೆ.
ಕುಂಭ- ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಮೀನ- ನಿರ್ಧಾರಗಳು ಮತ್ತು ಮದುವೆಯ ವಿಷಯದಲ್ಲಿ ಎಚ್ಚರಿಕೆ ಅಗತ್ಯ.