ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪರಿಸರ ರಕ್ಷಣೆ ಬಗೆಗಿನ ತಮ್ಮ ಜವಾಬ್ಧಾರಿಯನ್ನು ಅರಿತಿರೋ ಮಹೇಶ್ ಬಾಬು, ಆಡಿ ಇ-ಟ್ರಾನ್ ಕಾರನ್ನು ಖರೀದಿಸಿದ್ದಾರೆ.
ಇದು ಎಲೆಕ್ಟ್ರಿಕ್ ಕಾರು, ಕಳೆದ ವರ್ಷ ಈ SUV ಯನ್ನು ಆಡಿ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಬಲವಾದ ಕಾರ್ಯಕ್ಷಮತೆ ಹೊಂದಿರೋ ಆಡಿ ಇ-ಟ್ರಾನ್, ನೋಡಲು ಕೂಡ ಅಷ್ಟೇ ಆಕರ್ಷಕವಾಗಿದೆ. ಆಡಿ ಇ-ಟ್ರಾನ್ ಎಲೆಕ್ಟ್ರಿಕ್ SUV ಕಾರಿನ ವಿನ್ಯಾಸ ಕೂಡ ಬಹಳ ಅಂದವಾಗಿದೆ.
ದೊಡ್ಡ ಗ್ರಿಲ್, ಹಳದಿ ಬಣ್ಣದ ಕ್ಯಾಲಿಪರ್ ಈ ಕಾರಿನ ವಿಶೇಷತೆ. 20 ಇಂಚಿನ ಚಕ್ರಗಳನ್ನು ಇದಕ್ಕೆ ಅಳವಡಿಸಲಾಗಿದೆ. ಕಾರಿನ ಎರಡೂ ಬದಿಗಳಲ್ಲಿ ಚಾರ್ಜಿಂಗ್ ಪೋರ್ಟ್ಗಳಿವೆ. ಪನೋರಮಿಕ್ ಸನ್ರೂಫ್, 4-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್ಲೆಸ್ ಚಾರ್ಜಿಂಗ್, ಆ್ಯಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಆಂಬಿಯೆಂಟ್ ಲೈಟಿಂಗ್ ಮತ್ತು ಕ್ಯಾಬಿನ್ನಲ್ಲಿ ಏರ್ ಪ್ಯೂರಿಫೈಯರ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳಿವೆ.
ಆಡಿ ಈ ಕಾರಿನೊಂದಿಗೆ 11 kW AC ವಾಲ್ ಚಾರ್ಜರ್ ಅನ್ನು ಒದಗಿಸಿದೆ, ಇದನ್ನು 15 amp ಸಾಕೆಟ್ಗೆ ಹಾಕಿ ಚಾರ್ಜ್ ಮಾಡಬಹುದು. ಇ-ಟ್ರಾನ್ ಎಲೆಕ್ಟ್ರಿಕ್ SUV ಯಲ್ಲಿ, ಕಂಪನಿಯು 95 kWh ಗಂಟೆ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದೆ. ಇದು ಎರಡೂ ಎಕ್ಸಲ್ಗಳಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್ ಮೋಟರ್ಗಳಿಗೆ ಶಕ್ತಿ ನೀಡುತ್ತದೆ. ಒಮ್ಮೆ ಚಾರ್ಜ್ ಮಾಡಿದ್ರೆ ಈ ಕಾರು 484 ಕಿಮೀ ದೂರ ಚಲಿಸಬಲ್ಲದು.