ಫೆದರ್ ಜ್ಯುವೆಲರಿ ಅತ್ಯಂತ ಸೂಕ್ಷ್ಮ ಮತ್ತು ಮೃದುವಾಗಿರುತ್ತೆ. ಹಾಗಾಗಿ ಅವನ್ನೆಲ್ಲ ಕೇರ್ಫುಲ್ ಆಗಿ ಇಟ್ಕೋಬೇಕು. ಸ್ವಚ್ಛ ಮಾಡುವಾಗ್ಲೂ ಜಾಗರೂಕತೆ ಇರಲಿ. ಫೆದರ್ ಜ್ಯುವೆಲರಿಯನ್ನು ಹೇಗೆ ಇಟ್ಕೋಬೇಕು ಅನ್ನೋ ಬಗ್ಗೆ ಟಿಪ್ಸ್ ಇಲ್ಲಿದೆ.
ಎಲ್ಲಾ ಬಗೆಯ ಫೆದರ್ ಜ್ಯುವೆಲರಿಯನ್ನೂ ಕ್ಲೀನ್ ಮಾಡುವುದು ಅಸಾಧ್ಯ. ಅಕಸ್ಮಾತ್ ಸ್ವಚ್ಛಗೊಳಿಸಲೇಬೇಕು ಅಂದ್ರೂ ನೇರವಾಗಿ ನೀರಿನಲ್ಲಿ ಹಾಕಬೇಡಿ. ಫೆದರ್ ಜ್ಯುವೆಲರಿಯನ್ನು ಸ್ನಾನದ ಕೋಣೆಯ ಗೋಡೆಗೆ ನೇತು ಹಾಕಿ. ನೀವು ಶವರ್ ಆನ್ ಮಾಡಿದಾಗ ಹನಿ ಹನಿ ನೀರು ಬಿದ್ದು, ಅದು ತಂತಾನೇ ಕ್ಲೀನ್ ಆಗುತ್ತದೆ.
ಫೆದರ್ ಜ್ಯುವೆಲರಿಗಳನ್ನು ತಿಂಗಳಿಗೆ ಒಮ್ಮೆ ಸ್ವಚ್ಛಗೊಳಿಸಿದ್ರೆ ಸಾಕು. ಪದೇ ಪದೇ ಸ್ವಚ್ಛ ಮಾಡಿದ್ರೆ ಬಣ್ಣ ಕಳೆದುಕೊಂಡು ಕುಂದಿ ಹೋಗಬಹುದು. ಭಾರವಾದ ಆಭರಣಗಳ ಜೊತೆಗೆ ಫೆದರ್ ಜ್ಯುವೆಲರಿಯನ್ನು ಇಡಬೇಡಿ. ಪ್ರತ್ಯೇಕವಾಗಿ ಇಡುವುದು ಉತ್ತಮ.
ಡ್ರಾಯರ್ ಅಥವಾ ಬ್ಯಾಗ್ ನಲ್ಲಿ ಇವುಗಳನ್ನು ಹಾಕಿಟ್ಟರೆ ಮುದುಡಿ ಹೋಗುವ ಸಾಧ್ಯತೆಯೂ ಇದೆ. ಬಾಕ್ಸ್ ನಲ್ಲಿ ಹಾಕುವ ಬದಲು ನೇತು ಹಾಕಿಟ್ಟರೆ ಅದು ಹಾಳಾಗುವುದಿಲ್ಲ. ಫೆದರ್ ಜ್ಯುವೆಲರಿ ಒದ್ದೆಯಾಗಿ ಹೋದ್ರೆ ಗಾಬರಿಪಡಬೇಡಿ. ಅದನ್ನು ಕಡಿಮೆ ಸ್ಪೀಡ್ ನಲ್ಲಿ ಬ್ಲೋ ಡ್ರೈಯರ್ ಮೂಲಕ ಒಣಗಿಸಿ.