
ಸಿಹಿ ತಿನಿಸುಗಳೆಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಚಿಕ್ಕವರಿಂದ ಹಿಡಿದು ಹಿರಿಯರೂ ಕೂಡ ಸಿಹಿ ತಿನಿಸುಗಳನ್ನು ಇಷ್ಟಪಡುತ್ತಾರೆ. ಸುಲಭವಾಗಿ ಮಾಡಬಹುದಾದ ಬಾಸುಂದಿ ಕುರಿತ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
2 ಲೀಟರ್ ಹಾಲು, 40 ಗ್ರಾಂ ಪಿಸ್ತಾ, 40 ಗ್ರಾಂ ದ್ರಾಕ್ಷಿ. 40 ಗ್ರಾಂ ಬಾದಾಮಿ, 40 ಗ್ರಾಂ ಗೋಡಂಬಿ, 200 ಗ್ರಾಂ ಸಕ್ಕರೆ, 2 ಸ್ಪೂನ್ ಏಲಕ್ಕಿ ಪುಡಿ, 4-5 ರೋಸ್ ಎಸೆನ್ಸ್.
ತಯಾರಿಸುವ ವಿಧಾನ:
ಮೊದಲಿಗೆ ಹಾಲನ್ನು 2 ಲೋಟದಷ್ಟು ಇಂಗುವವರೆಗೆ ಕಾಯಿಸಿರಿ. ನಂತರ ಅದಕ್ಕೆ ಸಕ್ಕರೆ ಹಾಕಿ ಕರಗುವವರೆಗೆ ಕಾಯಿಸಿರಿ. ನಂತರದಲ್ಲಿ ಹಾಲು ಇಂಗಿ ದೋಸೆ ಹಿಟ್ಟಿನ ಹದಕ್ಕೆ ಬಂದ ಬಳಿಕ ಅದಕ್ಕೆ ಬಾದಾಮಿ, ಪಿಸ್ತಾ, ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದುಕೊಂಡು ಹಾಕಿರಿ.
ಇದರೊಂದಿಗೆ ಏಲಕ್ಕಿ ಪುಡಿ, ಎಸೆನ್ಸ್ ಬೆರೆಸಿ ಫ್ರಿಜ್ ನಲ್ಲಿಟ್ಟು ತಣ್ಣಗೆ ಆದ ಬಳಿಕ ತಿನ್ನಲು ಕೊಡಿ.