alex Certify ಸುಲಭವಾಗಿ ಮಾಡಿ ಟೇಸ್ಟಿಯಾದ ʼಗೀ ರೈಸ್ʼ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ಟೇಸ್ಟಿಯಾದ ʼಗೀ ರೈಸ್ʼ​

ಒಳ್ಳೆಯ ಕರ್ರಿ ಇದ್ಬಿಟ್ರೆ ಗೀ ರೈಸ್​ ತಿನ್ನೋ ಮಜಾನೇ ಬೇರೆ. ಹಾಗಂತ ಈ ಗೀ ರೈಸ್​ ಮಾಡೋದು ಹೇಗೆ ಅನ್ನೋದು ಬಹಳ ಮಂದಿಗೆ ಗೊತ್ತಿಲ್ಲ. ಆದರೆ ಈ ಗೀ ರೈಸ್​ ಮಾಡೋದು ಬಿರಿಯಾನಿ ಮಾಡಿದ್ದಕ್ಕಿಂತಲೂ ಬಲು ಸುಲಭ. ಹಾಗಾದ್ರೆ ಕುಕ್ಕರ್​ನಲ್ಲಿ ಗೀ ರೈಸ್​ ಮಾಡೋದು ಹೇಗೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.

ಬೇಕಾಗುವ ಸಾಮಗ್ರಿ : ಅಕ್ಕಿ 1 1/2 ಕಪ್​,  ಅಡುಗೆ ಎಣ್ಣೆ , ತುಪ್ಪ, ಪಲಾವ್​ ಎಲೆ 2, ಚಕ್ಕೆ 3, ಫ್ಲವರ್​ 3, ಲವಂಗ 5, ಏಲಕ್ಕಿ 4, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್​  2ಚಮಚ, ಹಸಿ ಮೆಣಸು 5, ಈರುಳ್ಳಿ 3, ಗೋಡಂಬಿ, ಪುದೀನಾ 1/2 ಕಪ್​, ಕೊತ್ತಂಬರಿ ಸೊಪ್ಪು, ಮೊಸರು 1/2 ಕಪ್​, ಹಾಲು 1/2 ಕಪ್​

ಮಾಡುವ ವಿಧಾನ: ಕುಕ್ಕರ್​ ಪಾತ್ರೆಯಲ್ಲಿ ಎಣ್ಣೆ ಹಾಗೂ ತುಪ್ಪ ಹಾಕಿಕೊಳ್ಳಿ. ಇದಕ್ಕೆ ನೀರಿನಲ್ಲಿ ನೆನೆಸಿ ಇಟ್ಟಿದ್ದ ಲವಂಗ, ಏಲಕ್ಕಿ, ಪಲಾವ್​ ಎಲೆಯನ್ನ ಹಾಕಿ. ಇದಾದ ಬಳಿಕ ಉದ್ದ ಕತ್ತರಿಸಿದ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗೋಡಂಬಿ, ಈರುಳ್ಳಿ, ಹಾಲು, ಮೊಸರು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಉಪ್ಪನ್ನ ಹಾಕಿ. ಇದಕ್ಕೆ ಮೊಸರು ಹಾಗೂ ಹಾಲನ್ನ ಸೇರಿಸಿ. ಬಳಿಕ ಮೂರು ಕಪ್​ ನೀರನ್ನ ಹಾಕಿ ತೊಳೆದಿಟ್ಟ ಅಕ್ಕಿಯನ್ನ ಹಾಕಿ. ನೀರು ಕುದಿಯಲು ಆರಂಭಿಸುತ್ತಿದ್ದಂತೆಯೇ ಕುಕ್ಕರ್​ ಮುಚ್ಚಳವನ್ನ ಮುಚ್ಚಿ. ಒಂದು ಸಿಟಿ ಬರ್ತಿದ್ದಂತೆ ಸ್ಟೌ ಆಫ್​ ಮಾಡಿ.  ಒಳ್ಳೆಯ ಕರ್ರಿ ಜೊತೆಗೆ ಗೀ ರೈಸ್​ ಸವಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...