ಅನ್ನ, ರಸಂ, ಸಾಂಬಾರು ಹೀಗೆ ಏನೇ ಮಾಡಿದ್ದರೂ ಅದರ ಜತೆಗೆ ಸಂಡಿಗೆ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಿಕ್ಕಿದ ಅನ್ನದಿಂದ ಮಾಡುವ ರುಚಿಕರವಾದ ಸಂಡಿಗೆಯ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್ ಅನ್ನ, ಜೀರಿಗೆ-1 ಟೀ ಸ್ಪೂನ್, ನೀರು-ಅಗತ್ಯವಿರುವಷ್ಟು, ಉಪ್ಪು-ರುಚಿಗೆ ತಕ್ಕಷ್ಟು, ಹಸಿಮೆಣಸು-2, ಸಾಂಬಾರ್ ಈರುಳ್ಳಿ-20.
ಮಾಡುವ ವಿಧಾನ:
ಮೊದಲಿಗೆ ಅನ್ನವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಒಂದು ಮಿಕ್ಸಿ ಜಾರಿಗೆ ಈರುಳ್ಳಿ ಹಾಗೂ ಹಸಿಮೆಣಸು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಅನ್ನದ ನೀರನ್ನು ಬಸಿದು ಇದನ್ನು ಕೂಡ ತರಿ ತರಿಯಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ನಂತರ ಒಂದು ಬೌಲ್ ಗೆ ರುಬ್ಬಿದ ಅನ್ನದ ಮಿಶ್ರಣ, ಹಸಿಮೆಣಸಿನ ಮಿಶ್ರಣ, ಜೀರಿಗೆ, ಉಪ್ಪು ಹಾಕಿ ಮಿಕ್ಸ್ ಮಾಡಿ. ಒಂದು ಅಗಲವಾದ ತಟ್ಟೆ ಅಥವಾ ಬಿಳಿ ಬಟ್ಟೆಯ ಮೇಲೆ ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಯನ್ನು ಹಾಕಿ. ಸೂರ್ಯನ ಬಿಸಿಲಿನಲ್ಲಿ ಇವುಗಳು ಚೆನ್ನಾಗಿ ಒಣಗುವವರಗೆ ಒಣಗಿಸಿ. 3 ಬಿಸಿಲು ಚೆನ್ನಾಗಿ ಸಿಗಲಿ. ನಂತರ ಇದನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ. ಬೇಕಾದಾಗ ಎಣ್ಣೆಯಲ್ಲಿ ಕರಿದು ತಿನ್ನಿರಿ.