
ಇದೀಗ ಇದೇ ವಿಡಿಯೋವನ್ನು ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆಡಳಿತರೂಢ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಅವರು, ಈ ಸೇತುವೆ ನೀರಿನಲ್ಲಿ ಮುಳುಗಿರುವಂತೆಯೇ 2023 ರಲ್ಲಿ ನಿಮ್ಮ ಸರ್ಕಾರವನ್ನು ಜನ ಮುಳುಗಿಸುತ್ತಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇತುವೆಗಳು ನೀರಿನಲ್ಲಿ ಮುಳುಗುತ್ತಿದ್ದರೆ, ಭ್ರಷ್ಟ ಸರ್ಕಾರ ಕಮಿಷನ್ ನಲ್ಲಿ ಮುಳುಗಿ ಹೋಗಿದೆ ಎಂದು ವ್ಯಂಗ್ಯವಾಡಿದ್ದಾರೆ.