ಸನ್ಯಾಸಿಯೊಬ್ಬರು ಕಡಿದಾದ ಪರ್ವತವನ್ನು ಏರುತ್ತಿರುವ ಹಳೆಯ ವಿಡಿಯೊ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ಆ ಸನ್ಯಾಸಿಯ ಸಾಹಸ ಆಶ್ಚರ್ಯವೆನಿಸುತ್ತದೆ. ಅವರು ಯಾವುದೇ ಸುರಕ್ಷತಾ ಸಾಮಗ್ರಿ ಬಳಸದೇ ಪರ್ವತ ಏರುವುದನ್ನು ನೋಡಬಹುದು. ಈ ವಿಡಿಯೋವನ್ನು ತನ್ಸು ಯೆಗೆನ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.
ಸನ್ಯಾಸಿ ಏರಿಹೋದ ಪಕ್ಕದಲ್ಲೇ ಮಹಿಳೆಯೊಬ್ಬರು ಸುರಕ್ಷತಾ ಸರಂಜಾಮುಗಳೊಂದಿಗೆ ಪರ್ವತ ಏರಲು ಪ್ರಯತ್ನಿಸುತ್ತಾ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಆ ಸನ್ಯಾಸಿ ಸ್ವಲ್ಪ ಸೆಕೆಂಡುಗಳಲ್ಲಿ ಸಲೀಸಾಗಿ ಮೇಲಕ್ಕೆ ಹೋಗುವುದನ್ನು ತೋರಿಸುತ್ತದೆ.
ಇದು ಕಡಿದಾದ ಪರ್ವತವಾಗಿದ್ದರಿಂದ ವಿಡಿಯೋ ಗಮನಿಸಿದವರಿಗೆ ಆಶ್ಚರ್ಯ ಎನಿಸುತ್ತದೆ. ಆ ಮಹಿಳೆ ತನ್ನ ದಾರಿಯಲ್ಲಿ ಸಾಗಲು ಹೆಣಗಾಡುತ್ತಿರುವಾಗ ಯಾವುದೇ ಸಹಾಯವಿಲ್ಲದೆ ಪರ್ವತವನ್ನು ಅನಾಯಾಸವಾಗಿ ಏರುವ ವ್ಯಕ್ತಿಯ ಧೈರ್ಯ ಮೆಚ್ಚುವಂಥದ್ದು.
ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಧ್ಯಾನ ಮತ್ತು ಯೋಗವು ಸನ್ಯಾಸಿಗೆ ನೆರವಾಗಿದೆ ಎಂದು ಭಾವಿಸಿದ್ದೇನೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.