ಕೊಪ್ಪಳ: ನಾಯಕತ್ವ ಬದಲಾವಣೆ ಚರ್ಚೆ ವಿಚಾರವಾಗಿ ಬಹಿರಂಗ ಹೇಳಿಕೆ ನೀಡದಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೀಡಿದ್ದ ಖಡಕ್ ಸೂಚನೆ ಬೆನ್ನಲ್ಲೇ ಇದೀಗ ರೆಬಲ್ ಶಾಸಕರು ಕೊಂಚ ತಣ್ಣಗಾದಂತೆ ಕಾಣುತ್ತಿದೆ.
ಬಿ.ಎಸ್. ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ ಈ ಬಗ್ಗೆ ಯಾವುದೇ ಅಸಮಾಧಾನವೂ ಇಲ್ಲ ಎಂದು ಹೇಳುವ ಮೂಲಕ ಸಚಿವ ಸಿ.ಪಿ. ಯೋಗೇಶ್ವರ್ ಅಸಮಾಧಾನದ ಹೊಗೆ ಆರಿಸುವ ಯತ್ನ ನಡೆಸಿದ್ದಾರೆ.
ಬೃಹತ್ ಆಯಿಲ್ ಮಾಫಿಯಾ ಬಯಲು; 8 ಆರೋಪಿಗಳ ಬಂಧನ; 35 ಲಕ್ಷ ಮೌಲ್ಯದ ವಸ್ತು ವಶಕ್ಕೆ
ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿರುವ ಸಚಿವ ಯೋಗೇಶ್ವರ್, ಪರೀಕ್ಷೆ ಬರೆದು ಉತ್ತರಕ್ಕಾಗಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿಲ್ಲ. ಇದು ಪವಿತ್ರ ಕ್ಷೇತ್ರ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಯತ್ನಾಳ್ ಹಾಗೂ ನಾನು ಸಮಕಾಲೀನರು ಹಾಗಾಗಿ ಅವರ ಕ್ಷೇತ್ರಕ್ಕೆ ಹೋಗಿದ್ದೇನೆ. ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ವಿಚಾರವಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ ಎಂದರು.
ʼಡ್ರೋನ್ʼ ಕಣ್ಣಲ್ಲಿ ಕುರಿ ಹಿಂಡಿನ ಅತ್ಯದ್ಭುತ ದೃಶ್ಯ ಸೆರೆ..!
ಇನ್ನು ಪರೀಕ್ಷೆ ಫಲಿತಾಂಶ ಯಾವಾಗ ಬರುತ್ತೆ ಗೊತ್ತಿಲ್ಲ. ಈ ಬಗ್ಗೆ ದೊಡ್ಡವರು ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ. ಸುಮ್ಮನೇ ನನ್ನನ್ನು ವಿಲನ್ ಮಾಡಬೇಡಿ. ನಾನು ಯಡಿಯೂರಪ್ಪ ವಿರುದ್ಧ ಹೋಗಿಲ್ಲ. ಹೋಗುವುದೂ ಇಲ್ಲ. ಈ ವಿಚಾರದಲ್ಲಿ ಅನಗತ್ಯವಾಗಿ ನನ್ನನ್ನು ಟಾರ್ಗೆಟ್ ಮಾಡಬೇಡಿ. ಕೆಲವೊಂದು ಸಮಸ್ಯೆಗಳನ್ನು ಹೇಳಿಕೊಳ್ಳುವ ನಿಟ್ಟಿನಲ್ಲಿ ವರಿಷ್ಠರನ್ನು ಭೆಟಿಯಾಗಿದ್ದೆ ಅಷ್ಟೇ ಎಂದು ಹೇಳಿದರು.