ಬೆಳಗಿನಿಂದ ರಾತ್ರಿಯವರೆಗೆ ಮೊಬೈಲ್, ಟಿವಿ ಅಥವಾ ಕಂಪ್ಯೂಟರ್ ನಲ್ಲಿ ದಿನ ಕಳೆಯುವುದಕ್ಕೋ ಏನೋ ಸರಿಯಾದ ನಿದ್ರೆ ಬೀಳುವುದೇ ಇಲ್ಲ. ಇದು ಹಲವು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಿ ಉತ್ತಮ ನಿದ್ದೆ ಪಡೆಯಲು ಹೀಗೆ ಮಾಡಿ.
ಬಾಳೆಹಣ್ಣಿನ ಸ್ಮೂಥಿ ತಯಾರಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಉತ್ತಮ ನಿದ್ದೆ ಪಡೆಯಬಹುದು. ಬಾಳೆಹಣ್ಣನ್ನು ಅರ್ಧಗಂಟೆ ಫ್ರಿಜ್ ನಲ್ಲಿಟ್ಟು ತೆಗೆದು ಹಾಲಿನೊಂದಿಗೆ ಬೆರೆಸಿ ಜ್ಯೂಸ್ ತಯಾರಿಸಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ.
ಬಾಳೆಹಣ್ಣಿನಲ್ಲಿರುವ ಪೊಟಾಶಿಯಂ ಸ್ನಾಯುಗಳ ಒತ್ತಡ ಕಡಿಮೆ ಮಾಡಿ ನಿದ್ರಾಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ.
ಚೆರ್ರಿ ಹಣ್ಣಿನಲ್ಲಿರುವ ಮೆಲಟೊನಿನ್ ಅಂಶ ನಿದ್ರಾಹೀನತೆಯನ್ನು ದೂರಮಾಡುತ್ತದೆ. ಹಾಗಾಗಿ ಮಲಗುವ ಮುನ್ನ ಈ ಹಣ್ಣನ್ನು ಸೇವಿಸುವುದು ಒಳ್ಳೆಯದು.
ಅರಶಿನ ಹಾಲು ಅಥವಾ ಸ್ಟ್ರಾಬೆರಿ ಹಾಲು ಕೂಡಾ ಇದೇ ಪರಿಣಾಮವನ್ನು ಬೀರುತ್ತವೆ. ಹಾಗಾಗಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು ಎಲ್ಲಾ ರೋಗಗಳಿಂದ ದೂರವಿರಬಹುದು.