ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಠೇವಣಿ ಮಾಡಿದ್ದ ಲಕ್ಷಾಂತರ ರೂಪಾಯಿ, ಉತ್ತರ ಪ್ರದೇಶದ ಅಂಚೆ ಕಚೇರಿಯಿಂದ ಕಾಣೆಯಾಗಿದೆ. ಈ ಪ್ರಕರಣ ಯುಪಿಯ ಬಾಗಪತ್ ಜಿಲ್ಲೆಯ ಬಾರೌತ್ ಪ್ರದೇಶದ ಅಂಚೆ ಕಚೇರಿಯಲ್ಲಿ ನಡೆದಿದೆ.
ಅಂಚೆ ಇಲಾಖೆ, ಇಲಾಖಾ ವಿಚಾರಣೆಯಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ಹಂಗಾಮಿ ಪೋಸ್ಟ್ ಮಾಸ್ಟರ್ ಅನ್ನು ಅಮಾನತು ಮಾಡಿದೆ. ಆತನ ವಿರುದ್ಧ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಗ್ರಾಮಸ್ಥರು ಈ ಗ್ರಾಮದ ಅಂಚೆ ಕಚೇರಿಯಲ್ಲಿ ಸುಮಾರು 18.50 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಸುಕನ್ಯಾ ಸಮೃದ್ಧಿ ಯೋಜನೆ ಮಾತ್ರವಲ್ಲದೆ, ಉಳಿತಾಯ ಖಾತೆ ಮತ್ತು ಆರ್‌ಡಿಯ ಹಣ ಹೂಡಿದ್ದರು.
ಅಂಚೆ ಕಚೇರಿಯಲ್ಲಿ ಕೆಲಸ ಮಾಡ್ತಿರುವ ಹಂಗಾಮಿ ಪೋಸ್ಟ್ ಮಾಸ್ಟರ್ ದೇವೇಂದ್ರ ಈ ಮೊತ್ತವನ್ನು ಕದ್ದಿದ್ದಾರೆ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಖಾತೆದಾರರು ಅಸಮಾಧಾನಗೊಂಡಿದ್ದಾರೆ. ಸದ್ಯ ದೇವೇಂದ್ರನನ್ನು ಅಮಾನತು ಮಾಡಲಾಗಿದೆ.