alex Certify ಸುಂದರ ಯುವತಿಯನ್ನು ದಿಟ್ಟಿಸಿದ ಪುಟ್ಟ ಪೋರ..! ನೋಡುತ್ತಿದ್ದಂತೆ ಕೊಟ್ಟ ಸ್ಮೈಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರ ಯುವತಿಯನ್ನು ದಿಟ್ಟಿಸಿದ ಪುಟ್ಟ ಪೋರ..! ನೋಡುತ್ತಿದ್ದಂತೆ ಕೊಟ್ಟ ಸ್ಮೈಲ್

Viral Video: Little Boy Stares at Pretty Woman, Smiles After Getting Caught. Watchರೆಸ್ಟೋರೆಂಟ್, ಮದುವೆ ಸಮಾರಂಭ ಅಥವಾ ಇನ್ನಿತರೆ ಯಾವುದೇ ಸ್ಥಳಗಳಲ್ಲಿ ಸುಂದರವಾದ ಯುವತಿಯರತ್ತ ಯುವಕರ ಗಮನವಿರುವುದು ಸಾಮಾನ್ಯವಾಗಿದೆ. ಆದರೀಗ ಪುಟ್ಟ ಬಾಲಕನೊಬ್ಬ ಯುವತಿಯನ್ನು ದಿಟ್ಟಿಸಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುಟ್ಟ ಬಾಲಕನೊಬ್ಬ ತನ್ನ ಕುಟುಂಬದೊಂದಿಗೆ ರೆಸ್ಟೋರೆಂಟ್‌ನಲ್ಲಿ  ಕುಳಿತಿದ್ದಾನೆ. ಪುಟ್ಟ ಪೋರ ಹಿಂತಿರುಗಿ ದಿಟ್ಟಿಸಿದ್ದಾನೆ. ಮತ್ತೊಂದು ಮೇಜಿನ ಬಳಿ ಕುಳಿತಿದ್ದ ಸುಂದರವಾದ ಯುವತಿಯನ್ನು ಕಣ್ಣು ಮಿಟುಕಿಸದೆ ತದೇಕಚಿತ್ತದಿಂದ ನೋಡಿದ್ದಾನೆ. ಆ ಯುವತಿ ತನ್ನ ಫೋನ್‌ ಅನ್ನು ನೋಡುವುದ್ರಲ್ಲೇ ಮಗ್ನಳಾಗಿದ್ದಳು. ಆದರೆ, ಬಾಲಕ ಮಾತ್ರ ಆಕೆಯನ್ನೇ ನೋಡುತ್ತಿರುತ್ತಾನೆ. ಈ ದೃಶ್ಯವನ್ನು ಯುವತಿಯ ಬಳಿ ಕುಳಿತಿದ್ದವರೊಬ್ಬರು ವಿಡಿಯೋ ಮಾಡಿದ್ದಾರೆ.

ಯುವತಿಯು ತನ್ನನ್ನೇ ನೋಡುತ್ತಿರುವವರಾರು ಎಂದು ನೋಡಿದಾಗ ಪುಟ್ಟ ಬಾಲಕನನ್ನು ಕಂಡು ನಗೆ ಬೀರಿದ್ದಾರೆ. ಬಾಲಕ ಕೂಡ ಯುವತಿ ನೋಡಿದ್ದಕ್ಕೆ ಬಹಳ ಮುದ್ದಾಗಿ ನಕ್ಕಿದ್ದಾನೆ. ಮುಖದ ತುಂಬಾ ನಗುವನ್ನು ಹೊಂದಿದ ಬಾಲಕನನ್ನು ಕಂಡು ಯುವತಿ ಕೂಡ ಜೋರಾಗಿ ನಕ್ಕಿದ್ದಾಳೆ.

ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೊದಲ ನೋಟದಲ್ಲೇ ಪ್ರೀತಿ ಎಂಬ ಶೀರ್ಷಿಕೆಯೊಂದಿಗೆ ಘಂಟಾ ಎಂಬ ಪುಟವು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಕೂಡ ನಗೆ ಬೀರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...