alex Certify ಸೀಬೆಹಣ್ಣು ತಿನ್ನಿ ಆರೋಗ್ಯ ವೃದ್ಧಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀಬೆಹಣ್ಣು ತಿನ್ನಿ ಆರೋಗ್ಯ ವೃದ್ಧಿಸಿಕೊಳ್ಳಿ

ಸೀಬೆಕಾಯಿ ಅಥವಾ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಉಪ್ಪು-ಖಾರ ಹಚ್ಚಿ ತಿನ್ನುವುದೇ ಆನಂದ. ಇದರಲ್ಲಿ ಹೇರಳವಾಗಿ ಪೌಷ್ಠಿಕಾಂಶಗಳಿವೆ.

* ಸೀಬೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟಾಷಿಯಂ ಮತ್ತು ಇತರ ಪೋಷಕಾಂಶಗಳು ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಕರಿಸುತ್ತವೆ. ಆ ಮೂಲಕ ಅಧಿಕ ರಕ್ತದ ಒತ್ತಡದ ಸಾಧ್ಯತೆಯನ್ನು ದೂರ ಮಾಡಬಲ್ಲದು.

* ಈ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಕರುಳುಗಳಲ್ಲಿ ಆಹಾರದ ಚಲನೆಯನ್ನು ಚುರುಕುಗೊಳಿಸುತ್ತದೆ.

* ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸೀಬೆ ಹಣ್ಣಿನಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಸುಸ್ಥಿತಿಯಲ್ಲಿರುವಂತೆ ಮಾಡುತ್ತದೆ.

* ಸೀಬೆಹಣ್ಣು ತಿನ್ನುವುದರಿಂದ ದೇಹದಲ್ಲಿ ಪೊಟಾಷಿಯಂ ಮತ್ತು ಸೋಡಿಯಂ ಲವಣಗಳು ಸೂಕ್ತ ರೀತಿಯಲ್ಲಿರುವಂತೆ ಮಾಡುವಲ್ಲಿ ನೆರವಾಗುತ್ತದೆ. ಇದರಿಂದ ಹೃದಯದ ಕಾರ್ಯ ಉತ್ತಮ ರೀತಿಯಲ್ಲಿರುವಂತೆ ಸಹಕರಿಸುತ್ತದೆ.

* ಸೀಬೆಹಣ್ಣಿನಲ್ಲಿರುವ ಕ್ಯಾಲ್ಸಿಯಂ, ವಿಟಮಿನ್‌ಗಳು, ವಿವಿಧ ಖನಿಜಗಳು ಸ್ನಾಯುಗಳ ಬೆಳವಣಿಗೆ ಮತ್ತು ದೃಢತೆಗೆ ಸಹಕರಿಸುತ್ತದೆ. ಆ ಮೂಲಕ ದೇಹದ ಆರೋಗ್ಯವನ್ನು ಸದೃಢವಾಗಿಡುತ್ತದೆ.

* ಇದರಲ್ಲಿ ಅಧಿಕವಾಗಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

* ಸೀಬೆಯಲ್ಲಿರುವ ಕರಗುವ ಮತ್ತು ಕರಗದ ನಾರಿನಂಶ ದೇಹದ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.

* ಸೀಬೆಯಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಅಂಶಗಳಿದ್ದು, ಮಧುಮೇಹಿಗಳೂ ಇದನ್ನು ತಿನ್ನಬಹುದಾಗಿದೆ. ಇದರಿಂದಾಗಿ ಮಧುಮೇಹಿಗಳು ತಿನ್ನಬಹುದಾದ ಹಣ್ಣುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

* ಈ ಹಣ್ಣನ್ನು ನಿಯಮಿತವಾಗಿ ಸೇವಿಸುವ ಮೂಲಕ, ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳುವತ್ತ ಗಮನ ಹರಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...