alex Certify ಸಿ.ಎಂ. ಇಬ್ರಾಹಿಂ ಮೇಲೆ ನೋಟಿನ ಕಂತೆ ತೂರಿದ ಜೆಡಿಎಸ್ ಕಾರ್ಯಕರ್ತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿ.ಎಂ. ಇಬ್ರಾಹಿಂ ಮೇಲೆ ನೋಟಿನ ಕಂತೆ ತೂರಿದ ಜೆಡಿಎಸ್ ಕಾರ್ಯಕರ್ತ…!

ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಎಲ್ಲ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಸಮಾವೇಶ ಒಂದರಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮೇಲೆ ಪಕ್ಷದ ಕಾರ್ಯಕರ್ತ ನೋಟಿನ ಕಂತೆ ತೂರಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶದ ಮೆರವಣಿಗೆಯಲ್ಲಿ ಸಿ.ಎಂ. ಇಬ್ರಾಹಿಂ ಹಾಗೂ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಪಾಲ್ಗೊಂಡಿದ್ದರು.

ಈ ವೇಳೆ ಸಂಗಮ ಟಾಕೀಸ್ ಬಳಿ ತೆರೆದ ವಾಹನದಲ್ಲಿದ್ದ ಇವರ ಮೇಲೆ ಕಾರ್ಯಕರ್ತರೊಬ್ಬರು 10, 20 ಹಾಗೂ 50 ರೂಪಾಯಿ ಮುಖಬೆಲೆಯ 2 ನೋಟಿನ ಕಂತೆಗಳನ್ನು ತೂರಿದ್ದು, ಇವುಗಳನ್ನು ಆರಿಸಿಕೊಳ್ಳಲು ಕೆಲವರು ಮುಗಿಬಿದ್ದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...