¼ ಕಪ್ ಹೆಸರು ಬೇಳೆ, ¾ ಕಪ್ –ಅಕ್ಕಿ, 1 ಕಪ್-ಹಾಲು, 1 ½ ಕಪ್-ನೀರು, ¾ ಕಪ್-ನೀರು, ½ ಕಪ್ ಬೆಲ್ಲ, ½ ಕಪ್ – ತೆಂಗಿನತುರಿ.
ಮಾಡುವ ವಿಧಾನ:
ಒಂದು ಪ್ಯಾನ್ ಗೆ ಹೆಸರು ಬೇಳೆಯನ್ನು ಹಾಕಿ ಅದು ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ ಇದಕ್ಕೆ ಹೆಸರು ಬೇಳೆ, 1 ½ ಕಪ್ ನೀರು, 1 ಕಪ್ ಹಾಲು ಹಾಕಿ 3 ವಿಷಲ್ ಕೂಗಿಸಿಕೊಳ್ಳಿ. ನಂತರ ಇನ್ನೊಂದು ಪಾತ್ರೆಗೆ ಬೆಲ್ಲ ಹಾಕಿ ಅದಕ್ಕೆ ½ ಕಪ್ ನೀರು ಹಾಕಿ ಬೆಲ್ಲ ಕರಗಿಸಿಕೊಳ್ಳಿ.
ನಂತರ ಬೆಂದ ಹೆಸರು ಬೇಳೆಗೆ ಕರಗಿಸಿಟ್ಟುಕೊಂಡ ಬೆಲ್ಲದ ಪಾಕವನ್ನು ಶೋಧಿಸಿಕೊಳ್ಳಿ. ನಂತರ ಇದಕ್ಕೆ ತೆಂಗಿನ ತುರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀರು ಕಡಿಮೆಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ 2 ಟೇಬಲ್ ಸ್ಪೂನ್ ತುಪ್ಪ ಸೇರಿಸಿ ಕುದಿಸಿಕೊಳ್ಳಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಯನ್ನು ಇದಕ್ಕೆ ಸೇರಿಸಿದರೆ ರುಚಿಕರವಾದ ಸಿಹಿ ಹುಗ್ಗಿ ಸವಿಯಲು ಸಿದ್ಧ.