ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರ ಗಾಯಕ ಹಾಗೂ ನಟ ಆದಿತ್ಯ ನಾರಾಯಣ್ ಮತ್ತು ನಟಿ ಶ್ವೇತಾ ಅಗರ್ವಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾದ ಫೋಟೋಗಳಲ್ಲಿ ಶ್ವೇತಾ ಅಗರ್ವಾಲ್ ಬೇಬಿ ಬಂಪ್ ಕೂಡ ಕಾಣುತ್ತಿದೆ.
ಶ್ವೇತಾ ಹಾಗೂ ನಾನು ನಮ್ಮ ಮೊದಲ ಮಗುವನ್ನು ಶೀಘ್ರದಲ್ಲಿಯೇ ಬರಮಾಡಿಕೊಳ್ಳಲಿದ್ದೇವೆ ಎಂದು ಹೇಳಲು ತುಂಬಾನೇ ಸಂತಸವಾಗುತ್ತಿದೆ ಎಂದು ಆದಿತ್ಯ ನಾರಾಯಣ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಟಿ ಶ್ವೇತಾ ಅಗರ್ವಾಲ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಗುಡ್ ನ್ಯೂಸ್ನ್ನು ಶೇರ್ ಮಾಡಿದ್ದಾರೆ.
ಶ್ವೇತಾ ಹಾಗೂ ನಾನು ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ಕಾಯುತ್ತಿದ್ದೇವೆ. ನನಗಂತೂ ಇದು ಅತಿ ವಾಸ್ತವಿಕ ಎನಿಸುತ್ತಿದೆ. ನನಗೆ ಮೊದಲಿನಿಂದಲೂ ಮಕ್ಕಳೆಂದೆರೆ ತುಂಬಾನೇ ಇಷ್ಟ. ನಾನು ಕೂಡ ತಂದೆಯಾಗಬೇಕು ಎಂದು ಬಹುದಿನಗಳಿಂದ ಬಯಸಿದ್ದೆ. ನಾವು ಕೆಲ ದಿನಗಳ ಹಿಂದಷ್ಟೇ ಗೋಲ್ಡನ್ ರಿಟ್ರೈವರ್ ನಾಯಿಯನ್ನೂ ದತ್ತು ಪಡೆದಿದ್ದೆವು. ನಮ್ಮ ಮನೆಗೆ ಶೀಘ್ರದಲ್ಲಿಯೇ ಒಂದು ವಿಶೇಷ ಶಕ್ತಿ ಆಗಮಿಸಲಿದೆ ಎಂದು ಆದಿತ್ಯ ನಾರಾಯಣ್ ಹೇಳಿದ್ದಾರೆ.
ಆದಿತ್ಯ ನಾರಾಯಣ್ ಹಾಗೂ ಶ್ವೇತಾ ಅಗರ್ವಾಲ್ ಮುಂಬೈನಲ್ಲಿ 2020ರ ಡಿಸೆಂಬರ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
https://www.instagram.com/p/CZGclahvlT4/?utm_source=ig_web_copy_link