ಬೇಕಾಗುವ ಸಾಮಾಗ್ರಿಗಳು :
2 ಕೆ.ಜಿ. ಬೂದು ಕುಂಬಳ ಕಾಯಿ, 800 ಗ್ರಾಂ ಸಕ್ಕರೆ, 1 ಲೀಟರ್ ಹಾಲು, 50 ಗ್ರಾಂ ತುಪ್ಪ, 25 ಗ್ರಾಂ ಗೋಡಂಬಿ-ದ್ರಾಕ್ಷಿ, ಏಲಕ್ಕಿ ಪುಡಿ.
ಮಾಡುವ ವಿಧಾನ :
ಬೂದು ಕುಂಬಳಕಾಯಿ ಸಿಪ್ಪೆ ಬೀಜ ತೆಗೆದು, ತಿರುಳನ್ನು ಕ್ಯಾರೆಟ್ ತುರಿದುಕೊಂಡಂತೆಯೆ ತುರಿದುಕೊಳ್ಳಿ. ದೊಡ್ಡ ಪಾತ್ರೆಯೊಂದರಲ್ಲಿ ಹಾಲು ಹಾಗೂ ಕುಂಬಳಕಾಯಿ ತುರಿಯನ್ನು ಸೇರಿಸಿ ಒಲೆಯ ಮೇಲಿಡಿ.
ಕುಂಬಳಕಾಯಿ ಬೆಂದು ಮೆತ್ತಗಾಗುತ್ತದೆ. ನಂತರ ಸಕ್ಕರೆ, ಏಲಕ್ಕಿ ಪುಡಿ, ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಕೆದಕಿ. ಆಮೇಲೆ 5 ನಿಮಿಷ ಇಟ್ಟು ಮಿಕ್ಕ ತುಪ್ಪದಲ್ಲಿ ಹುರಿದು ಗೋಡಂಬಿ-ದ್ರಾಕ್ಷಿ ಹಾಕಿರಿ. ಮಿಶ್ರಣವನ್ನು ಹಲ್ವಾ ಆದ ಮೇಲೆ ತಟ್ಟೆಗೆ ಸುರಿದು ಸಮನಾಗಿ ಹರಡಿ. ನಂತರ ಸವಿಯಿರಿ.