ಕಾಂಜೀವರಂ ಸೀರೆಯನ್ನು ಇಷ್ಟಪಟ್ಟು ಕೊಂಡು ತಂದು ಉಟ್ಟು ಮತ್ತೆ ಇಸ್ತ್ರಿ ಹಾಕಿದ ಬಳಿಕ ಹೇಗೆ ಸಂರಕ್ಷಿಸಿಡುವುದು ಎಂಬ ಸಂಶಯ ನಿಮಗೂ ಕಾಡಿದೆಯೇ, ಇಲ್ಲಿದೆ ಉತ್ತರ.
ಕಾಂಜೀವರಂ ಸೀರೆ ಸೂಕ್ಷ್ಮ ಸ್ವಭಾವದ್ದು. ಪದೇ ಪದೇ ಅದನ್ನು ವಾಶ್ ಮಾಡದಿರಿ. ಉಟ್ಟ ಬಳಿಕ ಬಿಸಿಲಿಗೆ ಒಣಹಾಕಿ, ಮತ್ತೆ ಮಡಿಚಿಡಿ. ವರ್ಷಕ್ಕೊಮ್ಮೆ ಸ್ವಾತಿ ಬಿಸಿಲಿಗೆ ಒಣಹಾಕಿ ತೆಗೆದಿಟ್ಟರೆ ಭಾರೀ ಒಳ್ಳೆಯದು. ಇದರ ಮೇಲೆ ಯಾವುದೇ ಬಾಡಿ ಸ್ಪ್ರೇ ಹಾಕದಿರಿ.
ಕನಿಷ್ಠ ಮೂರು ಬಾರಿ ಬಳಸಿದ ಬಳಿಕ ಡ್ರೈ ವಾಶ್ ಮಾಡಿಸಿ. ಇಲ್ಲವಾದರೆ ಮೈಲ್ಡ್ ಶ್ಯಾಂಪೂವಿನ ನೀರಿನಲ್ಲಿ ಮುಳುಗಿಸಿ ತೆಗೆಯಿರಿ. ಐರನ್ ಮಾಡಿ ಮಡಿಚಿ. ಜಾಸ್ತಿ ತಿಕ್ಕುವುದು ತೊಳೆಯುವುದು ಬೇಡವೇ ಬೇಡ.
ನಿಮ್ಮ ಸೀರೆ ಹೊಳಪೂ ಹೋಗದಂತೆ, ಹೊಸದರಂತೆ ಉಳಿಯಬೇಕಿದ್ದರೆ ಅದನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿಡಿ. ಬಳಿಕ ಹ್ಯಾಂಗರ್ ನಲ್ಲಿ ತೂಗುಹಾಕಿ.
ಮಡಿಚಿದ ಒಂದೇ ಫೋಲ್ಡರ್ ಉಳಿಯದಂತೆ ನೋಡಿಕೊಳ್ಳಿ. ಮೂರು ತಿಂಗಳಿಗೊಮ್ಮೆಯಾದರೂ ಬೇರೆ ವಿಧಾನದಲ್ಲಿ ಮಡಿಚಿಟಿ. ಇಲ್ಲವಾದರೆ ಫೋಲ್ಡ್ ಆದ ಜಾಗವೇ ಒಡೆದು ಸೀರೆ ಹರಿಯುತ್ತದೆ.