ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಾಗೂ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಮಜಿಥಿಯಾರನ್ನು ಸೋಲಿಸಿದ ಆಮ್ ಆದ್ಮಿ ಪಕ್ಷದ ಜೀವನ್ ಜ್ಯೋತ್ ಕೌರ್ ತಮ್ಮ ಗೆಲುವನ್ನು ಕೇಜ್ರಿವಾಲ್ ದೆಹಲಿ ಮಾದರಿಯ ಮ್ಯಾಜಿಕ್ ಎಂದು ಹೇಳಿದ್ದಾರೆ.
ಇದು ಜೀವನ್ ಜ್ಯೋತ್ ಕೌರ್ಗೆ ಮೊದಲ ಚುನಾವಣೆ. ಇತ್ತ ಸಿಧು ಹಾಗೂ ಮಜಿಥಿಯಾ ಈ ಹಿಂದೆ ಎಂದೂ ಚುನಾವಣೆಯಲ್ಲಿ ಸೋತ ಇತಿಹಾಸವೇ ಇರಲಿಲ್ಲ. ಆದರೆ ಜೀವನ್ ಜ್ಯೋತಿ ಕೌರ್ ಅಮೃತಸರ ಪೂರ್ವ ಕ್ಷೇತ್ರದಲ್ಲಿ ಸಿಧು ಹಾಗೂ ಮಜಿಥಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಜೀವನ್ ಜ್ಯೋತ್ಕೌರ್ ಅಮೃತಸರದಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರಿಂದ ಪ್ಯಾಡ್ ವುಮನ್ ಎಂದೇ ಪ್ರಸಿದ್ಧಿಯನ್ನು ಪಡೆದ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಪಂಜಾಬ್ನಲ್ಲಿ ಕೌರ್ ತಮ್ಮ ಚೊಚ್ಚಲ ಚುನಾವಣೆಯನ್ನು ಗೆದ್ದಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಆಪ್ 92 ಸೀಟುಗಳನ್ನು ಗೆದ್ದುಕೊಂಡಿದೆ. ಅಂದಹಾಗೆ ಪಂಜಾಬ್ನಲ್ಲಿ ಯಾವುದೇ ಒಂದು ರಾಜಕೀಯ ಪಕ್ಷವು 90ಕ್ಕೂ ಅಧಿಕ ಸೀಟುಗಳನ್ನು ಗೆದ್ದಿರುವುದು ಇದೇ ಮೊದಲಾಗಿದೆ.