ಮತಾತಂರ ನಿಷೇದ ಕಾಯ್ದೆ ವಿಚಾರಕ್ಕೆ ಸರ್ಕಾರ ಹಾಗೂ ಪ್ರತಿಪಕ್ಷದ ನಡುವೆ ವಾದ ವಾಗ್ವಾದ ಮುಂದುವರೆದಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂದು ವಾರದ ಒಳಗೆ ಮತಾಂತರ ನಿಷೇಧ ಕಾಯ್ದೆ ಕಿತ್ತುಹಾಕ್ತೀವಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಸಿದ್ಧರಾಮಯ್ಯನವರ ಪಕ್ಷ ಎಂದು ಅಧಿಕಾರಕ್ಕೆ ಬರಲ್ಲ. ಅವರು ಅಧಿಕಾರಕ್ಕೆ ಬಂದರೆ ಅಲ್ವಾ ಕಾಯ್ದೆಯನ್ನ ರದ್ದುಗೊಳಿಸೋಕೆ ಆಗೋದು. ಅವರು ಅಧಿಕಾರಕ್ಕೆ ಬರಲ್ಲ ಅದಕ್ಕೇ ಹಾಗೇ ಹೇಳ್ತಿದಾರೆ. ಅವರು ಹೇಳಿದ್ದು ಸಾಧ್ಯವಿಲ್ಲ ಎಂದು ಸುಧಾಕರ್ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಎರಡು ಮೌಂಟೇನ್ ಸೈಕಲ್ ಬಿಡುಗಡೆ ಮಾಡಿದ ಹೀರೋ
ಜೊತೆಗೆ ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯ ಕಾರಕಾರಣಿ ಸಭೆ ಬಗ್ಗೆ ಮಾತನಾಡಿರುವ ಸಚಿವ ಸುಧಾಕರ್, ಸಭೆಯಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಹೋಗುತ್ತಿದ್ದೇವೆ. ಬೊಮ್ಮಾಯಿ ಸಿಎಂ ಆದ ನಂತರ ನಡೆಯುತ್ತಿರು ಮೊದಲ ಕಾರ್ಯ ಕಾರಣಿ ಸಭೆ ಇದಾಗಿದೆ. ಒಂದೂವರೆ ವರ್ಷದ ನಂತರ ಚುನಾವಣೆ ಇದೆ, ಬಿಬಿಎಂಪಿ ಚುನಾವಣೆಯು ಹೊಸ್ತಿಲಲ್ಲಿದೆ. ಸಭೆಯಲ್ಲಿ ಹಲವು ವಿಚಾರಗಳನ್ನ ಚರ್ಚೆ ಮಾಡಲಾಗುತ್ತದೆ, ಪಕ್ಷ ಸಂಘಟನೆ ಬಗ್ಗೆ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಸಲಹೆ ಸೂಚನೆ ನೀಡಿಲಿದ್ದಾರೆ ಎಂದು ತಿಳಿಸಿದ್ದಾರೆ.