ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಅಲ್ಲ ಅವರು ಭಾವಿ ಸಿಎಂ ಎಂದು ಪುನರುಚ್ಛಾರ ಮಾಡಿದ ಶಾಸಕ ಜಮೀರ್ ಅಹ್ಮದ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ರಾಹುಲ್ ಗಾಂಧಿ ಜನ್ಮದಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸೇವಾದಳ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಕಾರ್ಯಕ್ರಮದ ವೇಳೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್, ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದ್ದಲ್ಲದೇ ಸಿದ್ದರಾಮಯ್ಯ ಮಾಜಿ ಅಲ್ಲ ಭಾವಿ ಸಿಎಂ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷನಾಗಿ ನಾನು ಇಲ್ಲಿದ್ದೇನೆ. ನಮ್ಮ ಕೆಲಸ, ಉದ್ದೇಶ ಮುಖ್ಯಮಂತ್ರಿಯಾಗುವುದಲ್ಲ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಎಂದು ತಿರುಗೇಟು ನೀಡಿದರು.
ಕರ್ನಾಟಕದ ಬಳಿಕ ಈ ರಾಜ್ಯದಲ್ಲೂ ಈಗ ಶುರುವಾಗಿದೆ ಟಿಪ್ಪು ಸುಲ್ತಾನ್ ವಿವಾದ..!
ಎಲ್ಲರಿಗೂ ಆಸೆ, ಆಕಾಂಕ್ಷೆಗಳಿರುತ್ತವೆ. ಸಿದ್ದರಾಮಯ್ಯನವರಿಗೂ ಅಭಿಮಾನಿಗಳು ಇದ್ದಾರೆ, ಹಾಗೇ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಎಲ್ಲರಿಗೂ ಅಭಿಮಾನ, ಅಭಿಮಾನಿಗಳು ಇದ್ದಾರೆ. ಯಾರೇ ಆಗಲಿ ಹದ್ದು ಮೀರಿ ಹೋಗಬಾರದು. ಈ ಬಗ್ಗೆ ಹಿಂದೊಮ್ಮೆ ಹೇಳಿದ್ದೇವೆ, ಹೈಕಮಾಂಡ್ ಕೂಡ ಈ ನಿಟ್ಟಿನಲ್ಲಿ ಸೂಚಿಸಿದೆ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
SHOCKING NEWS: 6-8 ವಾರಗಳಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ; ಏಮ್ಸ್ ಮುಖ್ಯಸ್ಥರ ಎಚ್ಚರಿಕೆ
ಈ ನಡುವೆ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜಮೀರ್ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ, ಶಾಕರ ವೈಯಕ್ತಿಕ ಅಭಿಪ್ರಾಯ. ನಮ್ಮಲ್ಲಿ ಒಂದು ಪದ್ಧತಿ ಇದೆ. ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಹೇಳಿದರು.