ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಇತರೆ 13 ಮಂದಿಯಿದ್ದ ಹೆಲಿಕಾಪ್ಟರ್ ಪತನಕ್ಕೆ ಪ್ರತಿಕೂಲ ಹವಾಮಾನವೇ ಕಾರಣ ಎಂಬ ಸಂಶೋಧನಾ ವರದಿಯನ್ನು ಐಎಎಫ್ ಉನ್ನತ ಅಧಿಕಾರಿಗಳು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಗೆ ಸಲ್ಲಿಸಿದ್ದಾರೆ.
ಡಿಸೆಂಬರ್ 8ರಂದು ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಅವಘಡದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿ ಸಾವನನ್ಪಪ್ಪಿದ್ದರು.
ಸಂಶೋಧನಾ ವರದಿಯಲ್ಲಿ ಈ ಅವಘಡವು ಮಾನವ ದೋಷದಿಂದ ಅಥವಾ ಯಾವುದೇ ತಾಂತ್ರಿಕ ದೋಷದಿಂದ ಈ ದುರಂತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ ಎನ್ನಲಾಗಿದೆ.
ತನಿಖೆಯ ಆವಿಷ್ಕಾರಗಳ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಜನರಲ್ ರಾವತ್ ಹಾಗೂ ಇತರೆ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಎಂಐ – 17ವಿ 5 ಹೆಲಿಕಾಪ್ಟರ್ ಹಠಾತ್ ಕೆಟ್ಟ ಹವಾಮಾನವನ್ನು ಎದುರಿಸಿದೆ ಎಂದು ತನಿಖಾ ವರದಿಯು ಹೇಳಿದೆ ಎನ್ನಲಾಗಿದೆ. ಇದು ಕುನ್ನೂರು ಬಳಿಯ ಕಾಡಿನಲ್ಲಿ ಪತನವಾಗುವ ಮುನ್ನ ಮೇಲ್ಮೈನಲ್ಲಿ ಅಪ್ಪಳಿಸಿದೆ ಎಂದು ಹೇಳಲಾಗಿದೆ.