ಭಾರತೀಯ ಸೇನೆಯು ದೇಶದ ಸಿಖ್ ಸೈನಿಕರಿಗೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಯುದ್ಧ ಹೆಲ್ಮೆಟ್ಗಳನ್ನು ತಯಾರಿಸಿದೆ. ಕಾನ್ಪುರ ಮೂಲದ ಗ್ಲೋಬಲ್ ಡಿಫೆನ್ಸ್ ಹಾಗೂ ಹೋಮ್ಲ್ಯಾಂಡ್ ಸೆಕ್ಯೂರಿಟಿ ಕಂಪನಿಯು ಉತ್ಪಾದಿಸಲಿರುವ ಹೆಲ್ಮೆಟ್ಗಳು ಸೈನಿಕರಿಗೆ ಬ್ಯಾಲಿಸ್ಟಿಕ್ ರಕ್ಷಣೆಯನ್ನು ಒದಗಿಸುತ್ತದೆ.
ಸಿಖ್ ಸೈನಿಕರು ತಾವು ಸಾಂಪ್ರದಾಯಿಕವಾಗಿ ಧರಿಸುವ ಪೇಟಕ್ಕೆ ಯಾವುದೇ ತೊಂದರೆಯಾಗದಂತೆ ಈ ಹೆಲ್ಮೆಟ್ ಧರಿಸಿಕೊಳ್ಳಬಹುದಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ಅಷ್ಟೇ ಏಕೆ ಇಡೀ ವಿಶ್ವದಲ್ಲಿ ಸಿಖ್ ಸೈನಿಕರ ಅವಶ್ಯಕತೆಗೆ ಸರಿಹೊಂದುವಂತಹ ಯಾವುದೇ ಹೆಲ್ಮೆಟ್ಗಳನ್ನು ವಿನ್ಯಾಸಗೊಳಿಸಲಾಗಿರಲಿಲ್ಲ.
ಈ ಹೆಲ್ಮೆಟ್ಗಳಿಗೆ ಕಂಪನಿಯು ವೀರ್ ಅಥವಾ ಕಾರ್ವೊ SCH 111 T. ಎಂದು ಹೆಸರಿಟ್ಟಿದೆ. ಹೆಲ್ಮೆಟ್ನ್ನು ಸ್ಮಾರ್ಟ್ ವಿನ್ಯಾಸ ಮತ್ತು ತಂತ್ರಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ ಇದು ಸಿಖ್ ಸೈನಿಕರಿಗೆ ಬ್ಯಾಲಿಸ್ಟಿಕ್ ರಕ್ಷಣೆಯನ್ನು ನೀಡುತ್ತದೆ.
ಹೆಲ್ಮೆಟ್‌ನ ವಿಶೇಷ ಆಕಾರವು ಅದನ್ನು ಸಿಖ್ ಸೈನಿಕರು ಧರಿಸುವ ‘ಬಟ್ಟೆ ಪಾಟ್ಕಾ’ದ ಮೇಲೆ ಧರಿಸಲು ಅನುವು ಮಾಡಿಕೊಡುತ್ತದೆ.