ಬೆಂಗಳೂರು: ಇಂದಿನ ಕೊರೊನಾ ಸೋಂಕಿನ ಆತಂಕದ ನಡುವೆ ಸ್ವಲ್ಪ ನೆಗಡಿ, ಕೆಮ್ಮು, ಜ್ವರ ಬಂದರೂ ಭಯಪಟ್ಟುಕೊಂಡು ಸಿಕ್ಕ ಸಿಕ್ಕ ಮಾತ್ರೆಗಳನ್ನೆಲ್ಲ ನುಂಗಿ ಕಾಯಿಲೆ ವಾಸಿ ಮಾಡಿಕೊಳ್ಳುವ ಅವಸರಕ್ಕೆ ಜನರು ಒಳಗಾಗುತ್ತಿದ್ದಾರೆ. ಆದರೆ ಹೀಗೆ ಮಾತ್ರೆಗಳನ್ನು ನುಂಗುವ ಮೊದಲು ಜನರು ಎಚ್ಚರದಿಂದ ಇರುವ ಅಗತ್ಯವಿದೆ. ಅನಗತ್ಯ ಔಷಧಿಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳು ಬೀರುತ್ತವೆ ಎಂದು ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಎಚ್ಚರಿಸಿದ್ದಾರೆ.
90 ವರ್ಷದ ವೃದ್ದ ಪಬ್‌ನಲ್ಲಿ ಬೇಕಾದ್ದನ್ನು ತರಿಸಿಕೊಂಡು ತಿನ್ನಲು ದುಡ್ಡು ಕಳುಹಿಸಿದ ನೆಟ್ಟಿಗರು
ಕೊರೊನಾದಂತಹ ಈ ಸಂದರ್ಭದಲ್ಲಿ ಮಲ್ಟಿ ವಿಟಮಿನ್, ವಿಟಮಿನ್ ಸಿ, ರೆಮ್ ಡಿಸಿವಿರ್ ಇಂಜೆಕ್ಷನ್ ಹೀಗೆ ಸಾಕಷ್ಟು ಮಾತ್ರೆಗಳು ಹಾಗೂ ಇಂಜೆಕ್ಷನ್ ನೀಡಲಾಗುತ್ತಿದೆ. ಆದರೆ ಇವುಗಳು ಕೊರೊನಾ ಇನ್ ಫೆಕ್ಷನ್ ಕಡಿಮೆ ಮಾಡಲಾರದು. ಬದಲಾಗಿ ಇವುಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮವೇ ಹೆಚ್ಚು. ಮಧುಮೇಹ, ಬ್ಲ್ಯಾಕ್ ಫಂಗಸ್, ಅತಿಯಾದ ಸುಸ್ತು ಹೀಗೆ ಹಲವು ರೀತಿಯ ಸೈಡ್ ಎಫೆಕ್ಟ್ ಗಳನ್ನುಂಟುಮಾಡುತ್ತವೆ. ಇದೀಗ ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಾಗಾಗಿ ಮಾತ್ರೆ ತಿನ್ನುವ ಮೊದಲು ವೈದ್ಯರಿಂದ ಸೂಕ್ತ ಸಲಹೆ ಪಡೆದುಕೊಳ್ಳುವುದು ಉತ್ತಮ ಎಂದು ಡಾ.ರಾಜು ಸಲಹೆ ನೀಡಿದ್ದಾರೆ.
https://www.youtube.com/watch?v=EPSvtZbl5HM