alex Certify ಸಿಎಂ ಸ್ಥಾನದಿಂದ ಉದ್ಧವ್​ ಠಾಕ್ರೆಯನ್ನು ಕೆಳಗಿಳಿಸಲು ನಡೆಯುತ್ತಿದೆ ಪ್ಲಾನ್​..? ಬಿಜೆಪಿ ರಾಜ್ಯಾಧ್ಯಕ್ಷರಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಸ್ಥಾನದಿಂದ ಉದ್ಧವ್​ ಠಾಕ್ರೆಯನ್ನು ಕೆಳಗಿಳಿಸಲು ನಡೆಯುತ್ತಿದೆ ಪ್ಲಾನ್​..? ಬಿಜೆಪಿ ರಾಜ್ಯಾಧ್ಯಕ್ಷರಿಂದ ಮಹತ್ವದ ಮಾಹಿತಿ

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ನೀಡಿರುವ ಕಾರ್ಯಸೂಚಿಯ ಸಂಬಂಧ ಶಿವಸೇನೆಯ ಸಂಸದ ಸಂಜಯ್​ ರಾವತ್​ ಕೆಲಸ ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್​ ಪಾಟೀಲ್ ಸ್ಪೋಟಕ ಮಾಹಿತಿ ನೀಡಿದ್ದಾರೆ.‌

ಮುಂಬೈನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪಾಟೀಲ್​, ನಮಗೆ ತಿಳಿದಿರುವ ಮಾಹಿತಿಯ ಪ್ರಕಾರ ಸಂಜಯ್​ ರಾವತ್​, ಶರದ್​ ಪವಾರ್ ನೀಡಿರುವ ಅಜೆಂಡಾದ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಧವ್​ ಠಾಕ್ರೆ ಸಿಎಂ ಆಗಿ 2.5 ವರ್ಷಗಳನ್ನು ಪೂರೈಸಿದ್ದಾರೆ. ಹೀಗಾಗಿ ಇದೀಗ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸುಪ್ರಿಯಾ ಸುಳೆಯನ್ನು ನೇರವಾಗಿ ಸಿಎಂ ಮಾಡಲು ಸಾಧ್ಯವಿಲ್ಲದ ಕಾರಣ ಸಂಜಯ್​ ರಾವತ್​ರನ್ನು ಸಿಎಂ ಆಗಿ ಮಾಡಲಾಗುತ್ತದೆ. ಇದೊಂದು ರೀತಿಯಲ್ಲಿ ಸುಳೆಯವರೇ ಸಿಎಂ ಆದಂತೆ ಎಂದು ಹೇಳಿದರು.

ಲೋಕಸಭಾ ಸಂಸದೆ ಹಾಗೂ ಎನ್​ಸಿಪಿ ನಾಯಕಿ ಸುಪ್ರಿಯಾ ಸುಳೆ ಶರದ್​ ಪವಾರ್​ರ ಪುತ್ರಿ. ಚಳಿಗಾಲದ ಅಧಿವೇಶನದ ಮೊದಲ ದಿನದಂದು ಆರೋಗ್ಯ ಸಮಸ್ಯೆಗಳಿಂದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ವಿಧಾನಸಭೆಗೆ ಗೈರಾದ ಬಳಿಕ ಪಾಟೀಲ್,​​ ಉದ್ಧವ್​ ಠಾಕ್ರೆ ಚೇತರಿಸಿಕೊಳ್ಳುವವರೆಗೆ ತಮ್ಮ ಅಧಿಕಾರವನ್ನು ಬೇರೆಯವರಿಗೆ ನೀಡುವುದು ಒಳಿತು ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...