alex Certify ಸಿಎಂ ಮಮತಾ ಬ್ಯಾನರ್ಜಿ ನಿವಾಸಕ್ಕೆ ನಟ ಸಲ್ಮಾನ್ ಖಾನ್ ಭೇಟಿ; ಕುತೂಹಲ ಮೂಡಿಸಿದ ಮಾತುಕತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಮಮತಾ ಬ್ಯಾನರ್ಜಿ ನಿವಾಸಕ್ಕೆ ನಟ ಸಲ್ಮಾನ್ ಖಾನ್ ಭೇಟಿ; ಕುತೂಹಲ ಮೂಡಿಸಿದ ಮಾತುಕತೆ

Watch: Salman Khan meets Mamata Banerjee in Kolkata | Kolkata - Hindustan Timesಬಾಲಿವುಡ್ ನಟ ಸಲ್ಮಾನ್ ಖಾನ್ ಶನಿವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು. ಕೊಲ್ಕತ್ತಾದ ಕಾಲಿಘಾಟ್‌ನಲ್ಲಿರುವ ದೀದಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಸಲ್ಮಾನ್ ಖಾನ್ ಸಂಜೆ 4.25 ರ ಸುಮಾರಿಗೆ ಟಿಎಂಸಿ ಮುಖ್ಯಸ್ಥೆ ನಿವಾಸವನ್ನು ತಲುಪಿದರು. ಈ ವೇಳೆ ನಟ ಸಲ್ಮಾನ್ ಖಾನ್ ರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಮಮತಾ ಬ್ಯಾನರ್ಜಿ ನಿವಾಸದಲ್ಲಿ ಸುಮಾರು 30 ನಿಮಿಷಗಳ ಕಾಲ ಸಲ್ಮಾನ್ ಖಾನ್ ಉಪಸ್ಥಿತರಿದ್ದರು. ಶನಿವಾರ ಸಂಜೆ ನಂತರ ನಡೆಯಲಿರುವ ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್‌ನ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲು ನಟ ಸಲ್ಮಾನ್ ಖಾನ್ ಕೊಲ್ಕತ್ತಾಗೆ ಭೇಟಿ ನೀಡಿದ್ದಾರೆ.

ಸಲ್ಮಾನ್ ಖಾನ್ ಗೆ ಈಗಾಗಲೇ ಜೀವ ಬೆದರಿಕೆ ಇರುವುದರಿಂದ ಅವರು ತಂಗಲಿರುವ ಹೊಟೇಲ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

— ANI (@ANI) May 13, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...