
ಸಲ್ಮಾನ್ ಖಾನ್ ಸಂಜೆ 4.25 ರ ಸುಮಾರಿಗೆ ಟಿಎಂಸಿ ಮುಖ್ಯಸ್ಥೆ ನಿವಾಸವನ್ನು ತಲುಪಿದರು. ಈ ವೇಳೆ ನಟ ಸಲ್ಮಾನ್ ಖಾನ್ ರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಮಮತಾ ಬ್ಯಾನರ್ಜಿ ನಿವಾಸದಲ್ಲಿ ಸುಮಾರು 30 ನಿಮಿಷಗಳ ಕಾಲ ಸಲ್ಮಾನ್ ಖಾನ್ ಉಪಸ್ಥಿತರಿದ್ದರು. ಶನಿವಾರ ಸಂಜೆ ನಂತರ ನಡೆಯಲಿರುವ ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್‌ನ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲು ನಟ ಸಲ್ಮಾನ್ ಖಾನ್ ಕೊಲ್ಕತ್ತಾಗೆ ಭೇಟಿ ನೀಡಿದ್ದಾರೆ.
ಸಲ್ಮಾನ್ ಖಾನ್ ಗೆ ಈಗಾಗಲೇ ಜೀವ ಬೆದರಿಕೆ ಇರುವುದರಿಂದ ಅವರು ತಂಗಲಿರುವ ಹೊಟೇಲ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.