ನಿಮ್ಮ ನಾಲಿಗೆಯ ಟೇಸ್ಟ್ ಬಡ್ಸ್ ಗಳನ್ನು ಉತ್ತೇಜಿಸಬೇಕೇ, ಹಾಗಿದ್ದಲ್ಲಿ ಈ ಸ್ಪೈಸಿ ಫ್ಲೇವರ್ಸ್ ಕ್ಯಾರೆಟ್ ರಸವನ್ನು ಮಾಡಿ ಕುಡಿದು ನೋಡಿ. ಅದು ಕೇವಲ ನಾಲಿಗೆ ರುಚಿಗಷ್ಟೇ ಅಲ್ಲ, ಜ್ವರದಿಂದ ಬಳಲುತ್ತಿರುವವರಿಗೆ ಕಷಾಯವಾಗಿ ಕೂಡ ಕೊಡಬಹುದು. ಸಾಮಾನ್ಯವಾಗಿ ನಾವೆಲ್ಲಾ ಸಿಹಿಯಾದ ಕ್ಯಾರೆಟ್ ಜ್ಯೂಸ್ ಮಾತ್ರ ಟೇಸ್ಟ್ ಮಾಡಿರುತ್ತೇವೆ. ಫಾರ್ ಎ ಚೇಂಜ್ ಈ ಸ್ಪೈಸೀ ಡ್ರಿಂಕ್ ಟ್ರೈ ಮಾಡಿನೋಡಿ.
ಬೇಕಾಗಿರುವ ಸಾಮಗ್ರಿಗಳು : 1 ಇಂಚು ಶುಂಠಿ, 1 ನಿಂಬೆ ಹಣ್ಣು, 4 ಕ್ಯಾರೆಟ್, ಪೆಪ್ಪರ್ ಪೌಡರ್ ಸ್ವಲ್ಪ, ಬ್ಲಾಕ್ ಸಾಲ್ಟ್ ಸ್ವಲ್ಪ, ಪುದೀನ ಎಲೆ 2.
ಮಾಡುವ ವಿಧಾನ : ಮೊದಲು ನೀರಿನಿಂದ ಕ್ಯಾರೆಟ್ ಗಳನ್ನು ತೊಳೆದುಕೊಂಡು, ಮೇಲ್ಪದರದ ಸಿಪ್ಪೆಯನ್ನು ತೆಗೆದು ಜ್ಯೂಸರ್ ನಲ್ಲಿ ಹಾಕಿ. ಇದಕ್ಕೆ ಶುಂಠಿ, ನಿಂಬೆ ಹಣ್ಣಿನ ರಸ ಮತ್ತು ಪುದೀನಾ ಎಲೆಗಳನ್ನು ಒಟ್ಟಿಗೆ ಸೇರಿಸಿ, ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ.
ನಂತರ ಒಂದು ಗ್ಲಾಸ್ ಕಂಟೈನರ್ ಗೆ ರುಬ್ಬಿದ ಮಿಶ್ರಣವನ್ನು ಫಿಲ್ಟರ್ ಮಾಡಿಕೊಳ್ಳಿ. ನಂತರ ಇದಕ್ಕೆ ಪೆಪ್ಪರ್ ಪೌಡರ್, ಬ್ಲಾಕ್ ಸಾಲ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಿಂಪಲ್ ಮತ್ತು ಹೆಲ್ತಿಯಾದ ಸ್ಪೈಸೀ ಕ್ಯಾರೆಟ್ ಜ್ಯೂಸ್ ಈಗ ರೆಡಿ.