ಕೆಲ ದಿನಗಳ ಹಿಂದಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ರೆಪೋ ದರ ಏರಿಕೆ ಮಾಡಿದ್ದು, ಇದರ ಪರಿಣಾಮ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದುಬಾರಿಯಾಗಿತ್ತು. ಇದೀಗ ಮತ್ತೆ ರೆಪೋ ದರವನ್ನು ಶೇಕಡಾ 0.50 ರಷ್ಟು ಏರಿಕೆ ಮಾಡಲಾಗಿದ್ದು, ಬಡ್ಡಿ ದರಗಳು ಮತ್ತಷ್ಟು ಏರಿಕೆ ಆಗಲಿವೆ.
ಆದರೆ ಇದು ಉಳಿತಾಯ ಯೋಜನೆಗಳ ಮೇಲೆ ಹೂಡಿಕೆ ಮಾಡಿದವರಿಗೆ ಅನುಕೂಲವಾಗಲಿದ್ದು, ಅಂತವರಿಗೆ ಹೆಚ್ಚಿನ ಬಡ್ಡಿ ಸಿಗಲಿದೆ. ಆದರೆ ಗೃಹ, ವಾಹನ, ವೈಯಕ್ತಿಕ ಸೇರಿದಂತೆ ಮತ್ತಿತರೆ ಕಾರಣಗಳಿಗಾಗಿ ಸಾಲ ಪಡೆದವರು ಮತ್ತಷ್ಟು ದುಬಾರಿ ಬಡ್ಡಿ ತೆರಬೇಕಿದೆ.
ಕಳೆದ ಬಾರಿ ರೆಪೋ ದರ ಏರಿಕೆ ಮಾಡಿದ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ, ಎಚ್.ಡಿ.ಎಫ್.ಸಿ. ಸೇರಿದಂತೆ ಬಹುತೇಕ ಎಲ್ಲಾ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದ್ದು, ಇದೀಗ ರೆಪೋ ದರ ಮತ್ತೆ ಏರಿಕೆಯಾಗಿರುವುದರಿಂದ ಸದ್ಯದಲ್ಲೇ ಬಡ್ಡಿ ದರವನ್ನು ಮತ್ತಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ.