alex Certify ಸಾರಿಗೆ ಬಸ್ ನಿರ್ವಹಿಸುವ ದಂಪತಿ; ಇದರಲ್ಲಿದೆ ಸಿಸಿ ಟಿವಿ, ಏರ್ ಫ್ರೆಶ್‌ನರ್, ಮಕ್ಕಳಿಗೆ ಗೊಂಬೆ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರಿಗೆ ಬಸ್ ನಿರ್ವಹಿಸುವ ದಂಪತಿ; ಇದರಲ್ಲಿದೆ ಸಿಸಿ ಟಿವಿ, ಏರ್ ಫ್ರೆಶ್‌ನರ್, ಮಕ್ಕಳಿಗೆ ಗೊಂಬೆ !

ಇದೊಂದು ಬಹಳ ಅಪರೂಪದ ಪ್ರಸಂಗವಾಗಿರಬಹುದು. ನೆರೆಯ ಕೇರಳ ರಾಜ್ಯದ ಸಾರಿಗೆ ಸಂಸ್ಥೆಯ ಬಸ್​ ಅನ್ನು ಗಂಡ – ಹೆಂಡತಿ ನಿರ್ವಹಿಸುತ್ತಾರೆ. ಅವರ ವಿಶೇಷ ಕಾರ್ಯನಿರ್ವಹಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅದು ಯಾವುದೇ ಬಸ್ಸಿನಂತಲ್ಲ, ಗಿರಿ ಮತ್ತು ತಾರಾ ಎಂಬ ದಂಪತಿ ಬಸ್​ ಅನ್ನು ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಅಲಪ್ಪುಳ ಜಿಲ್ಲೆಯ ಹರಿಪಾಡ್​ ಕೆಎಸ್​ಆರ್​ಟಿಸಿ ಡಿಪೋದಲ್ಲಿ ಸ್ಥಳಿಯರಿಗೆ, ಈ ಬಸ್​ ಸಂರ್ಪೂಣವಾಗಿ ಅಸಾಮಾನ್ಯವಾಗಿದೆ.

ವೈರಲ್​ ಆಗಿರುವ ವಿಡಿಯೋವನ್ನು ಐಪೆ ವಲ್ಲಿಕಾಡನ್​ ಎಂಬುವವರು ಫೇಸ್​ ಬುಕ್​ ನಲ್ಲಿ ಪೋಸ್ಟ್​ ಮಾಡಿದ್ದಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಆರು ಸಿಸಿಟಿವಿ ಕ್ಯಾಮೆರಾಗಳು, ಎಮರ್ಜೆನ್ಸಿ ಸ್ವಿಚ್​ಗಳು, ಆರಾಮದಾಯಕ ಪ್ರಯಾಣಕ್ಕಾಗಿ ಸಂಗೀತ ವ್ಯವಸ್ಥೆ, ಸ್ವಯಂಚಾಲಿತ ಏರ್​ ಫ್ರೆಶನರ್​, ಮಕ್ಕಳ ಮನರಂಜನೆಗಾಗಿ ಗೊಂಬೆಗಳು ಮತ್ತು ಅಲಂಕಾರಗಳು ಹಾಗೂ ವಾಹನದಲ್ಲಿ ಎಲ್​ಇಡಿ ಡೆಸ್ಟಿನೇಶನ್​ ಬೋರ್ಡ್​ ಸಹ ಇದೆ.

ಗಿರಿ ಮತ್ತು ತಾರಾ ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ಈ ಬಸ್ಸನ್ನು ತುಂಬಾ ಸುಂದರಗೊಳಿಸಿದ್ದಾರೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ. ಅವರಿಗೆ ಸಾಕಷ್ಟು ಅಭಿಮಾನಿಗಳೂ ಇದ್ದಾರೆ. ವಾಸ್ತವವಾಗಿ, ಈ ಬಸ್​ನಲ್ಲಿ ನಿಯಮಿತವಾಗಿ ಪ್ರಯಾಣಿಸುವ ಪ್ರಯಾಣಿಕರು ಹಲವಾರು ವಾಟ್ಸಾಪ್​ ಗುಂಪುಗಳನ್ನು ಸಹ ಪ್ರಾರಂಭಿಸಿದ್ದಾರೆ.

ನಸುಕಿನ 1.15 ಕ್ಕೆ ಎದ್ದು, 2 ಗಟೆಗೆ ಡಿಪೋ ತಲುಪುವ ಜೋಡಿ ಬಸ್​ ಸ್ವಚ್ಛಗೊಳಿಸಿ 5.30ಕ್ಕೆ ಕರ್ತವ್ಯ ಆರಂಭಿಸುತ್ತಾರೆ. ಇದನ್ನೇ ತಾರಾ ಅವರು ಹಂಚಿಕೊಂಡಿದ್ದಾರೆ. ಅಂದಹಾಗೆ ತಾರಾ ಮತ್ತು ಗಿರಿಯವರು ಇತ್ತೀಚಿಗೆ ಮದುವೆಯಾಗಿದ್ದರೂ 20 ವರ್ಷದ ಪ್ರೇಮಕತೆ ಹೊಂದಿದ್ದಾರೆ. ಕೋವಿಡ್​ ವೇಳೆ ಇವರು ವಿವಾಹವಾದರಂತೆ.

Kerala Couple Operates A Bus Together

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...