
ಅದು ಯಾವುದೇ ಬಸ್ಸಿನಂತಲ್ಲ, ಗಿರಿ ಮತ್ತು ತಾರಾ ಎಂಬ ದಂಪತಿ ಬಸ್ ಅನ್ನು ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಅಲಪ್ಪುಳ ಜಿಲ್ಲೆಯ ಹರಿಪಾಡ್ ಕೆಎಸ್ಆರ್ಟಿಸಿ ಡಿಪೋದಲ್ಲಿ ಸ್ಥಳಿಯರಿಗೆ, ಈ ಬಸ್ ಸಂರ್ಪೂಣವಾಗಿ ಅಸಾಮಾನ್ಯವಾಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಐಪೆ ವಲ್ಲಿಕಾಡನ್ ಎಂಬುವವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಆರು ಸಿಸಿಟಿವಿ ಕ್ಯಾಮೆರಾಗಳು, ಎಮರ್ಜೆನ್ಸಿ ಸ್ವಿಚ್ಗಳು, ಆರಾಮದಾಯಕ ಪ್ರಯಾಣಕ್ಕಾಗಿ ಸಂಗೀತ ವ್ಯವಸ್ಥೆ, ಸ್ವಯಂಚಾಲಿತ ಏರ್ ಫ್ರೆಶನರ್, ಮಕ್ಕಳ ಮನರಂಜನೆಗಾಗಿ ಗೊಂಬೆಗಳು ಮತ್ತು ಅಲಂಕಾರಗಳು ಹಾಗೂ ವಾಹನದಲ್ಲಿ ಎಲ್ಇಡಿ ಡೆಸ್ಟಿನೇಶನ್ ಬೋರ್ಡ್ ಸಹ ಇದೆ.
ಗಿರಿ ಮತ್ತು ತಾರಾ ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ಈ ಬಸ್ಸನ್ನು ತುಂಬಾ ಸುಂದರಗೊಳಿಸಿದ್ದಾರೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ. ಅವರಿಗೆ ಸಾಕಷ್ಟು ಅಭಿಮಾನಿಗಳೂ ಇದ್ದಾರೆ. ವಾಸ್ತವವಾಗಿ, ಈ ಬಸ್ನಲ್ಲಿ ನಿಯಮಿತವಾಗಿ ಪ್ರಯಾಣಿಸುವ ಪ್ರಯಾಣಿಕರು ಹಲವಾರು ವಾಟ್ಸಾಪ್ ಗುಂಪುಗಳನ್ನು ಸಹ ಪ್ರಾರಂಭಿಸಿದ್ದಾರೆ.
ನಸುಕಿನ 1.15 ಕ್ಕೆ ಎದ್ದು, 2 ಗಟೆಗೆ ಡಿಪೋ ತಲುಪುವ ಜೋಡಿ ಬಸ್ ಸ್ವಚ್ಛಗೊಳಿಸಿ 5.30ಕ್ಕೆ ಕರ್ತವ್ಯ ಆರಂಭಿಸುತ್ತಾರೆ. ಇದನ್ನೇ ತಾರಾ ಅವರು ಹಂಚಿಕೊಂಡಿದ್ದಾರೆ. ಅಂದಹಾಗೆ ತಾರಾ ಮತ್ತು ಗಿರಿಯವರು ಇತ್ತೀಚಿಗೆ ಮದುವೆಯಾಗಿದ್ದರೂ 20 ವರ್ಷದ ಪ್ರೇಮಕತೆ ಹೊಂದಿದ್ದಾರೆ. ಕೋವಿಡ್ ವೇಳೆ ಇವರು ವಿವಾಹವಾದರಂತೆ.