ನಾಯಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಹಿತಿಂಡಿಗಳು ಮತ್ತು ಸಕ್ಕರೆಗಳನ್ನು ನೀಡಬಾರದು. ಏಕೆಂದರೆ ಅವುಗಳ ಜೀರ್ಣಾಂಗ ವ್ಯವಸ್ಥೆಯು ತುಂಬಾ ವಿಭಿನ್ನವಾಗಿರುತ್ತದೆ.
ನಾಯಿಗಳಿಗೆ ಸಿಹಿತಿಂಡಿಗಳು ಸಮಸ್ಯೆಯಲ್ಲವಾದರೂ, ಕೆಲವು ರೀತಿಯ ಸಿಹಿತಿಂಡಿಗಳು ನಾಯಿಗಳಿಗೆ ವಿಷಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಮಾಲೀಕರು ಶ್ವಾನವು ಏನು ಮತ್ತು ಎಷ್ಟು ಆಹಾರವನ್ನು ನೀಡಬೇಕು ಎಂಬುದನ್ನು ತಿಳಿದಿರಬೇಕು.
ಚಾಕೊಲೇಟ್ ಅನ್ನು ಇಷ್ಟಪಡದವರು ಯಾರು ಹೇಳಿ..? ಇದು ಥಿಯೋಬ್ರೊಮಿನ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ನಾಯಿಗಳಿಗೆ ವಿಷಕಾರಿಯಾಗಿದೆ ಮತ್ತು ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು. ಅದಕ್ಕಾಗಿಯೇ ಯುಕೆಯ ಈ ಸ್ಟೋರಿಯು ನಾಯಿ ಮಾಲೀಕರಿಗೆ ಒಂದು ಪಾಠವಾಗಿದೆ.
ನಾನು ಬದುಕಿರುವವರೆಗೂ ಭಾರತವನ್ನ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ-ರಶೀದ್ ಖಾನ್
ಆರು ವರ್ಷದ ಸ್ಟಾಫರ್ಡ್‌ಶೈರ್ ಬುಲ್ ಟೆರಿಯರ್ ಎಂಬ ನಾಯಿ ಆರು ಪ್ಯಾಕೇಜುಗಳ ಕ್ರಿಸ್ಮಸ್ ಚಾಕೊಲೇಟ್ ಗಳನ್ನು ಮತ್ತು ಅದರ ಸುತ್ತುವ ಫಾಯಿಲ್ ಅನ್ನು ಸೇವಿಸಿದೆ. ಇದರಿಂದ ಶ್ವಾನದ ಜೀವ ಅಪಾಯಕ್ಕೆ ಸಿಲುಕಿದ್ದು, ನಾಯಿಯ ಹೊಟ್ಟೆಯಲ್ಲಿ ಫಾಯಿಲ್ ಅಂಟಿಕೊಂಡಿರುವುದು ಎಕ್ಸ್-ರೇನಲ್ಲಿ ಕಂಡುಬಂದಿದೆ. ಕೊನೆಗೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಅದೃಷ್ಟವಶಾತ್ ನಾಯಿ ಬದುಕುಳಿದಿದೆ.
ಚಾಕೋಲೇಟ್ ತಿಂದು ಮಲಗಿದ್ದ ನಾಯಿಯು, ಕೆಲವು ಹೊತ್ತಿನಲ್ಲಿ ರಕ್ತ ವಾಂತಿ ಮಾಡಿದೆ. ಕೂಡಲೇ ಮಾಲಕಿ ಶ್ವಾನವನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ನಾಯಿಯನ್ನು ಉಳಿಸಲು ಪಶುವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಇನ್ಮುಂದೆ ನಾಯಿಗಳಿಗೆ ಏನಾದರೂ ಕೊಡುವ ಮುನ್ನ ಅಥವಾ ಅವುಗಳ ಕೈಗೆಟಕುವ ಜಾಗದಲ್ಲಿ ಚಾಕೋಲೇಟ್ ಇಡುವ ಮುನ್ನ ಕೊಂಚ ಹುಷಾರಾಗಿರಿ.