alex Certify ಸಹೋದರನ ಪುತ್ರಿ ಜನ್ಮದಿನದ ಫೋಟೋ ಶೇರ್​ ಮಾಡಿದ ವರುಣ್​ ಧವನ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರನ ಪುತ್ರಿ ಜನ್ಮದಿನದ ಫೋಟೋ ಶೇರ್​ ಮಾಡಿದ ವರುಣ್​ ಧವನ್​​..!

ಬಾಲಿವುಡ್​ ನಟ ವರುಣ್​ ಧವನ್​ ತಮ್ಮ ಸಹೋದರ ರೋಹಿತ್​ ಧವನ್ ಹಾಗೂ ಜಾನ್ವಿ ಧವನ್​ರ ಮುದ್ದಾದ ಪುತ್ರಿ ನಿಯಾರಾ ಜನ್ಮದಿನಾಚರಣೆಯಲ್ಲಿ ಭಾಗಿಯಾಗಿದ್ದು, ಇದರ ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ನಿಯಾರಾ ಮೂರನೇ ವರ್ಷದ ಜನ್ಮದಿನೋತ್ಸವದ ಪ್ರಯುಕ್ತ ಆಕೆಯ ಕುಟುಂಬಸ್ಥರು ಕಾಡಿನ ಮಾದರಿಯ ಕೇಕ್​ನ್ನು ತರಿಸಿದ್ದಾರೆ. ನಿಯಾರಾ ಚಿಕ್ಕಪ್ಪ ವರುಣ್​ ತೊಡೆ ಮೇಲೆ ಕೂತಿದ್ದರೆ ಆಕೆಯ ತಂದೆ ಕೇಕ್​ ತಿನ್ನಿಸುತ್ತಿರೋದನ್ನ ನೀವು ಫೋಟೋಗಳಲ್ಲಿ ಕಾಣಬಹುದಾಗಿದೆ. ನಿಹಾರಾ ಸಜ್ಜು ಲಾಲಿ ಹಾಗೂ ಅಜ್ಜ ಡೇವಿಡ್​ ಮತ್ತು ತಾಯಿ ಜಾನ್ವಿ ಕೂಡ ಫೋಟೋದಲ್ಲಿದ್ದಾರೆ.

ಈ ಫೋಟೋಗಳನ್ನ ಶೇರ್​ ಮಾಡಿರುವ ವರುಣ್​ ಧವನ್, ಘರ್​ (ಮನೆ) ಎಂದು ಶೀರ್ಷಿಕೆ ನೀಡಿದ್ದಾರೆ. ಈ ಮುದ್ದಾದ ಫೋಟೋಗಳಿಗೆ ವರುಣ್​ ಇನ್​ಸ್ಟಾ ಅಭಿಮಾನಿಗಳು ಲೈಕ್​ ಹಾಗೂ ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ವರುಣ್​ ಧವನ್​ ನತಾಶಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇವರ ವಿವಾಹ ಕಾರ್ಯಕ್ರಮಕ್ಕೆ ಕುಟುಂಬಸ್ಥರು ಹಾಗೂ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ತಮ್ಮ ಮುಂಬರುವ ಸಿನಿಮಾ ಶೂಟಿಂಗ್​ಗಾಗಿ ಅರುಣಾಚಲ ಪ್ರದೇಶಕ್ಕೆ ತೆರಳಿದ್ದ ವರುಣ್​ ಜೊತೆಗೆ ತಮ್ಮ ಪತ್ನಿ ನತಾಶಾರನ್ನೂ ಕರೆದೊಯ್ದಿದ್ದರು. ಆದರೆ ಕೊರೊನಾ 2ನೆ ಅಲೆಯಿಂದಾಗಿ ಈ ಸಿನಿಮಾ ತಂಡ ಮುಂಬೈಗೆ ವಾಪಸ್ಸಾಗಬೇಕಾಯ್ತು.

View this post on Instagram

A post shared by VarunDhawan (@varundvn)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...