alex Certify ಸಸ್ಯಾಹಾರ – ಮಾಂಸಹಾರದಲ್ಲಿ ಯಾವುದು ಉತ್ತಮ…..? ತಿಳಿದುಕೊಳ್ಳಲು ಅವಳಿ ಸಹೋದರರು ಮಾಡಿದ್ರು ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಸ್ಯಾಹಾರ – ಮಾಂಸಹಾರದಲ್ಲಿ ಯಾವುದು ಉತ್ತಮ…..? ತಿಳಿದುಕೊಳ್ಳಲು ಅವಳಿ ಸಹೋದರರು ಮಾಡಿದ್ರು ಈ ಕೆಲಸ

ಮಾಂಸಾಹಾರ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂಬ ಚರ್ಚೆ ವರ್ಷಗಳಿಂದಲೂ ನಡೆಯುತ್ತಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಈ ಕುರಿತು ಪರಸ್ಪರ ಮಾತಿನ ಸಮರಗಳು ಸರ್ವೇ ಸಾಮಾನ್ಯ.

ಇದೀಗ ಈ ಚರ್ಚೆಯನ್ನು ಪ್ರಾಕ್ಟಿಕಲ್ ಮಟ್ಟದಲ್ಲಿ ತೆಗೆದುಕೊಂಡ ಅವಳಿಗಳಾದ ಹ್ಯೂಗೋ ಹಾಗೂ ರಾಸ್ ಟರ್ನರ್‌‌ ಅಧ್ಯಯನವೊಂದರಲ್ಲಿ ಭಾಗಿಯಾಗಿದ್ದು, ಸಸ್ಯಾಹಾರ ಹಾಗೂ ಮಾಂಸಾಹಾರದಲ್ಲಿ ಯಾವುದು ಉತ್ತಮವೆಂದು ಕಂಡುಕೊಳ್ಳಲು ಮುಂದಾಗಿದ್ದಾರೆ.

ಹ್ಯೂಗೋ 12 ವಾರಗಳ ಮಟ್ಟಿಗೆ ಮಾಂಸ, ಮೀನು, ಮೊಟ್ಟೆ ಹಾಗೂ ಡೈರಿ ಉತ್ಪನ್ನಗಳನ್ನು ತ್ಯಜಿಸಿದ್ದಾರೆ. ರಾಸ್ ಟರ್ನರ್‌‌ ಅವರು ಮಾಂಸಾಹಾರ ಸೇವನೆಗೆ ಮುಂದಾಗಿದ್ದಾರೆ.

ಲಂಡನ್‌ನ ಕಿಂಗ್ಸ್‌ ಕಾಲೇಜಿನ ಸಂಶೋಧಕರು ನಡೆಸಿದ ಈ ಅಧ್ಯಯನದಲ್ಲಿ, ಇಬ್ಬರೂ ಸಹೋದರರು ಪ್ರತಿನಿತ್ಯ ಒಂದೇ ಪ್ರಮಾಣದ ಕೆಲೊರಿಗಳನ್ನು ಸೇವಿಸುತ್ತಾ ಒಂದೇ ರೀತಿಯ ಜಿಮ್ ವ್ಯಾಯಾಮಗಳನ್ನು ಮಾಡಿದ್ದಾರೆ.

12 ವಾರಗಳ ಬಳಿಕ ಅವಳಿಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ನೋಡಿದಾಗ; ಹ್ಯುಗೋರ ದೇಹದಲ್ಲಿರುವ ಗಟ್ ಬ್ಯಾಕ್ಟೀರಿಯಾದ ವೈವಿಧ್ಯತೆ ಕಡಿಮೆಯಾಗಿದ್ದು ಕಂಡು ಬಂದಲ್ಲಿ, ಆತನ ಸಹೋದರನದ್ದು ಅಷ್ಟೇ ಪ್ರಮಾಣದಲ್ಲಿತ್ತು.

“ನಾನು ಸಸ್ಯಾಹಾರದ ಪಥ್ಯದಲ್ಲಿದ್ದು, ಇದು ನಿಮ್ಮ ದೇಹದ ಮೇಲೆ ನಿಜಕ್ಕೂ ಪರಿಣಾಮ ಬೀರುತ್ತದೆ. ನಾನು ಮುಂಚೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳ ಸೇವನೆ ಮಾಡುತ್ತಿದ್ದೆ. ಇದರರ್ಥ ನನ್ನ ದೇಹದಲ್ಲಿರುವ ಸಕ್ಕರೆ ಪ್ರಮಾಣವು ಸಂತುಲಿತಗೊಂಡು ಇನ್ನಷ್ಟು ಉತ್ಸಾಹಭರಿತನಾಗುತ್ತಿದ್ದೆ,” ಎಂದಿದ್ದಾರೆ ಹ್ಯುಗೋ.

ಮತ್ತೊಂದೆಡೆ, ಹ್ಯುಗೋ ಸಹೋದರ ರಾಸ್, ತಾನು ಕೆಲವೊಂದು ದಿನಗಳಲ್ಲಿ ಬಹಳ ಉತ್ಸಾಹಿಯಾಗಿದ್ದರೆ ಮತ್ತೊಂದಷ್ಟು ದಿನಗಳಲ್ಲಿ ಮಂದವಾಗಿರುತ್ತಿದ್ದುದ್ದಾಗಿ ತಿಳಿಸಿದ್ದಾರೆ. ಆದರೆ ಹ್ಯುಗೋನ ಉತ್ಸಾಹದ ಮಟ್ಟ ಅಷ್ಟೂ ದಿವಸ ಒಂದೇ ಮಟ್ಟದಲ್ಲಿರುವುದು ಕಂಡು ಬಂದಿದೆ.

ಹ್ಯುಗೋ ದೇಹದ ತೂಕ ಹಾಗೂ ಕೊಲೆಸ್ಟರಾಲ್ ಮಟ್ಟದಲ್ಲಿ ಇಳಿಕೆಯಾಗಿತ್ತು. ಆದರೆ, ತಮ್ಮಿಬ್ಬರ ನಡುವೆ ಯಾವುದೇ ದೊಡ್ಡ ವ್ಯತ್ಯಾಸವಾಗಿಲ್ಲ ಎಂದು ಅವಳಿ ಸಹೋದರರು ತಿಳಿಸಿದ್ದಾರೆ. ಹ್ಯುಗೋ 185 ಪೌಂಡ್‌ಗಳಿಂದ 181 ಪೌಂಡ್‌ಗೆ ಇಳಿದರೆ, ಆತನ ಸಹೋದರ ಇದೇ ಅವಧಿಯಲ್ಲಿ ಕೊಬ್ಬಿನಂಶ ಹೆಚ್ಚಾಗಿ, ದೇಹದ ತೂಕವು 189 ಪೌಂಡ್‌ಗಳಿಗೆ ಏರಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...