ನೇಂದ್ರ ಬಾಳೆ ಹಣ್ಣು – 4
ಸಕ್ಕರೆ -1 ಲೋಟ
ಏಲಕ್ಕಿಪುಡಿ ಸ್ವಲ್ಪ
ತುಪ್ಪ ಕರಿಯಲು
ಮಾಡುವ ವಿಧಾನ
ಮೊದಲಿಗೆ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಸಕ್ಕರೆ ಮುಳುಗುವಷ್ಟು ನೀರನ್ನು ಬಾಣಲಿಗೆ ಹಾಕಿ ಐದು ನಿಮಿಷಗಳ ಕಾಲ ಕುದಿಸಬೇಕು. ಸಕ್ಕರೆ ಪಾಕವನ್ನು ಒಂದೆಡೆ ತೆಗೆದು ಇಟ್ಟುಕೊಳ್ಳಬೇಕು.
ಬಾಳೆಹಣ್ಣನ್ನು ಬಿಲ್ಲೆಗಳಂತೆ ಕತ್ತರಿಸಿ ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಬಾಳೆಹಣ್ಣಿನ ಬಿಲ್ಲೆಗಳನ್ನು ಜಾಮೂನಿನಂತೆ ಕರೆಯಬೇಕು. ಕರಿದ ನಂತರ ಬಿಸಿಯಾದ ಸಕ್ಕರೆ ಪಾಕಕ್ಕೆ ಹಾಕಿ ಬಾಳೆಹಣ್ಣಿನ ಜಾಮೂನನ್ನು ನಂತರ ಸವಿಯಬಹುದು.